ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ

Public TV
2 Min Read

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತಕ್ಷಣ ನಾವು ಬಿಜೆಪಿಗೆ ಹೊಗುತ್ತೇವೆ ಎಂದಲ್ಲ. ಹಾಸನ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿಯವರಲ್ಲಿ ಚರ್ಚಿಸೋಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಎಚ್‌.ಡಿ.ದೇವೇಗೌಡ ಮತ್ತು ಪ್ರಧಾನಿ ಮೋದಿ ಭೇಟಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ದೇವೇಗೌಡ, ಮೋದಿ ಭಾಯಿಭಾಯಿ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಸಿದ್ದು ಟೀಕೆಗೆ ತಿರುಗೇಟು ನೀಡಿರುವ ಎಚ್‌.ಡಿ.ದೇವೇಗೌಡ, ಪ್ರಧಾನ ಮಂತ್ರಿಯವರನ್ನು ನಾನು ಸಾಕಷ್ಟು ಸಲ ಭೇಟಿ ಮಾಡಿದ್ದೇನೆ. ಮನಮೋಹನ್ ಸಿಂಗ್, ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೆ. ನಾನು ಒಳಗೆ ಹೊರಗೆ ರಾಜಕೀಯ ಮಾಡೋ ಪ್ರಶ್ನೆ ಬೇರೆ. ಪ್ರಧಾನಿ ಭೇಟಿ ಮಾಡೋಕೆ ಸಿದ್ದರಾಮಯ್ಯ ಪರ್ಮಿಷನ್ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಆಯ್ಕೆ ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ

ಬೆಳಗ್ಗೆ ಒಂದು, ರಾತ್ರಿ ಒಂದು ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ನೇರವಾಗಿ ರಾಜಕೀಯ ಮಾಡುವ ವ್ಯಕ್ತಿ ನಾನು. ಇನ್ನು ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಬೆಂಬಲ ಕೊಡುವುದು 2023ರ ಚುನಾವಣೆಯಲ್ಲಿ ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.

ರೈತರ ಸಾಲ ಮನ್ನಾ ಮಾಡಿ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ರೈತನ ಮಗನಾಗಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿಯಂತೆ ದೇಶದಲ್ಲಿ ಯಾರೂ ಆಡಳಿತ ನಡೆಸಿಲ್ಲ. ಕುಮಾರಸ್ವಾಮಿ ನನ್ನ ಅನುಮತಿ ಇಲ್ಲದೇ ಬಿಜೆಪಿಗೆ ಹೋಗಿ ಸರ್ಕಾರ ಮಾಡಿದ್ದರು. ನಂತರ ಕಾಂಗ್ರೆಸ್‍ನವರು ಮನೆ ಬಾಗಿಲಿಗೆ ಬಂದು ಬೇಡಿಕೊಂಡು ಸಿಎಂ ಮಾಡಿದರು. ಮತ್ತೆ ಈ ಸರ್ಕಾರವನ್ನು ತೆಗೆದವರು ಅವರೇ ಕಿಡಿಕಾರಿದರು. ಇದನ್ನೂ ಓದಿ: FD Interest- ಈ 2 ಬ್ಯಾಂಕ್‍ಗಳಲ್ಲಿನ ಠೇವಣಿಗೆ ಸಿಗುತ್ತೆ ಹೆಚ್ಚು ಬಡ್ಡಿ ದರ

ಕಾಂಗ್ರೆಸ್‍ನವರು ಜೆಡಿಎಸ್‍ಗೆ ಬೆಂಬಲ ನೀಡಬೇಕಾದರೆ ನಾನು ಬೇಡ ಅಂದೆ. ಕಾಂಗ್ರೆಸ್‍ನವರು ಸಮ್ಮಿಶ್ರ ಸರ್ಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಮೈತ್ರಿ ಸರ್ಕಾರ ತೆಗೆದವರು ಯಾರು? ಉತ್ತರ ಕೊಡುತ್ತಾರಾ? ಕುಮಾರಸ್ವಾಮಿ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಕಾಂಗ್ರೆಸ್‍ನವರ ಹಣೆಬರಹ ಏನೆಂದು ಗೊತ್ತಿದೆ. ಸಮಯ ಬಂದಾಗ ಹೇಳುವೆ ಎಂದರು.

ಸುಪಾರಿ ಪ್ರಕರಣದ ಬಗ್ಗೆ ಸಿಎಂ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಹಣವಂತರು ರಾಜಕೀಯಕ್ಕೆ ಬರಲು ಇದು ಒಂದು ಕಾರಣ. ಸುಪಾರಿ ಪ್ರಕರಣ ಸೂಕ್ತ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *