ಹುಟ್ಟೂರಲ್ಲಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದೊಡ್ಡಗೌಡ್ರು

1 Min Read

ಹಾಸನ: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು (H.D Devegowda) ಹೊಳೆನರಸೀಪುರ ತಾಲೂಕಿನ ಹುಟ್ಟೂರು ಹರದನಹಳ್ಳಿ ಗ್ರಾಮದ ಮನೆ ದೇವರು ದೇವೇಶ್ವರನ ಸನ್ನಿಧಿಯಲ್ಲಿ (Temple) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು. ಬಳಿಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಮ, ಹವನದಲ್ಲಿ ಪಾಲ್ಗೊಂಡರು. ಈ ವೇಳೆ ಪುತ್ರ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಶಾಸಕ ಹೆಚ್.ಪಿ.ಸ್ವರೂಪ್‍ಪ್ರಕಾಶ್ ಸಾಥ್ ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಮಾದಕ ವಸ್ತು ಸೀಜ್ – ಪರಮೇಶ್ವರ್ ರಾಜೀನಾಮೆಗೆ JDS ಆಗ್ರಹ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಜೆಡಿಎಸ್‌ (JDS) ಕಾರ್ಯಕರ್ತರ ಸಮಾವೇಶಕ್ಕೆ ಅವರು ಆಗಮಿಸಿದ್ದರು. ಸಮಾವೇಶಕ್ಕೂ ಮೊದಲು ದೇವರ ದರ್ಶನ ಪಡೆದರು. ಒಂದು ವರ್ಷದ ಹಿಂದೆ ಅವರು ದೇವೇಶ್ವರನ ದರ್ಶನ ಪಡೆದಿದ್ದರು. ಅದಾದ ಬಳಿಕ ಇಂದು ಅವರು ದೇವರ ದರ್ಶನ ಪಡೆದರು. ಇದನ್ನೂ ಓದಿ: ಕೋಗಿಲು ಲೇಔಟ್‌ – ರಾಜೀವ್ ಗಾಂಧಿ ವಸತಿ ಯೋಜನೆಯ 20 ಅಧಿಕಾರಿಗಳು ಭೇಟಿ

Share This Article