ಗಂಡಸರು ಎಂದು ಹೇಳಿಕೊಳ್ಳೋ ಬಿಜೆಪಿಯವ್ರು ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸಿ: ಹೆಚ್.ಸಿ ಬಾಲಕೃಷ್ಣ

Public TV
1 Min Read

ರಾಮನಗರ: ಮಾತೆತ್ತಿದರೆ ನಾವು ಗಂಡಸರು ಎಂದು ಹೇಳಿಕೊಳ್ಳುವ ಬಿಜೆಪಿಯವರು (BJP) ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಬಳಿ ಹಣ ಬಿಡುಗಡೆ ಮಾಡಿಸಿಕೊಂಡು ಬನ್ನಿ ಎಂದು ಬಿಜೆಪಿಗರಿಗೆ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಸವಾಲು ಹಾಕಿದ್ದಾರೆ.

ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಬರಹ ಬದಲಾಯಿಸುವ ವಿಚಾರ ಕುರಿತು ಮಾತನಾಡಿದರು. ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆದಿರೋದ್ರಲ್ಲಿ ಏನು ತಪ್ಪಿದೆ? ವಿಚಾರ ಮಾಡೋಕೆ ಬೇಕಾದಷ್ಟಿದೆ. ಅದು ಬಿಟ್ಟು ಬಿಜೆಪಿಯವರು ಇದನ್ನ ಹಿಡಿದುಕೊಂಡು ಅಳ್ಳಾಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಅವಮಾನ ಮಾಡಬೇಕು ಎನ್ನುವ ಉದ್ದೇಶ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ

ಶಾಲೆಗಳಲ್ಲಿ ಬರಹದ ವಿಚಾರ ಸರ್ಕಾರದ ಆದೇಶ ಕೂಡಾ ಅಲ್ಲ. ಸ್ಥಳೀಯವಾಗಿ ಏನೋ ಮಾಡಿಕೊಂಡಿದ್ದಾರೆ ಅಷ್ಟೇ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಪ್ಪಾಗಿದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಮಂತ್ರಿಗಳೇನು ಆದೇಶ ಮಾಡಿಲ್ಲ. ಅಸಲಿಗೆ ಇದು ವಿಚಾರವೇ ಅಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಘೋಷಣೆ

Share This Article