ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

Public TV
1 Min Read

ರಾಮನಗರ: ನಮ್ಮ ಸರ್ಕಾರದ 2,000 ರೂ. ಗ್ಯಾರಂಟಿ ದುಡ್ಡು ಬರ್ತಿದೆ ತಾನೆ. ಮೋದಿ ನಿಮ್ಮ ಖಾತೆಗೆ ಹಣ ಹಾಕ್ತೀನಿ ಎಂದಿದ್ರಲ್ಲ ಬರ್ತಿದಿಯಾ? 15 ಲಕ್ಷ ರೂ. ಹಣ ಕೊಡ್ತೀನಿ ಎಂದ್ರಲ್ಲಾ 15 ರೂ. ಕೊಟ್ರಾ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (H.C Balakrishna) ಅವರು ಬಿಜೆಪಿ (BJP) ವಿರುದ್ಧ ಕಿಡಿಕಾರಿದ್ದಾರೆ.

ಬಿಡದಿಯ ಅವರಗೆರೆಯಲ್ಲಿ ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ಈಗ ನಡೆಯಲಿರುವ ಚುನಾವಣೆ (Lok Sabha Election 2024) ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ. ಹೆಚ್.ಡಿ.ಕುಮಾರಸ್ವಾಮಿ (H.D Kumaraswamy), ಅಮಿತ್ ಶಾ ಅವರ ಬಳಿ ಹೋಗಿ ನಾವು ಹೆಚ್ಚು ಸ್ಥಾನ ಗೆದ್ದು ಗ್ಯಾರಂಟಿ ನಿಲ್ಲಿಸದಿದ್ದರೆ ಮುಂದಿನ 9 ವರ್ಷ ಕಾಂಗ್ರೆಸ್ ಸರ್ಕಾರ ಅಲುಗಾಡಿಸಲು ಆಗಲ್ಲ ಎಂದಿದ್ದಾರೆ. ಅವರಿಗೆ ಗ್ಯಾರಂಟಿ ಮೇಲೆ ಎಷ್ಟು ಭಯ ಇದೆ ನೋಡಿ. ಇದು ಶ್ರೀಮಂತರ ಸರ್ಕಾರ ಅಲ್ಲ ಬಡವರ ಸರ್ಕಾರ. ಅದಕ್ಕಾಗಿ ನಿಮಗೆ ಗ್ಯಾರಂಟಿ ಕೊಡ್ತಿರೋದು. ಗ್ಯಾರಂಟಿ ಮುಂದುವರಿಸಿ ಅನ್ನೋದಾದ್ರೆ ಲೋಕಸಭೆಯಲ್ಲೂ ನಮಗೆ ಆಶೀರ್ವಾದ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

ಗ್ಯಾರಂಟಿ ಕೊಡ್ತೀರಾ ನಿಮ್ಮ ಕೈಯಲ್ಲಿ ಆಗುತ್ತಾ? ಎಂದು ಬಿಜೆಪಿ-ಜೆಡಿಎಸ್‍ನವರು ಕೇಳಿದ್ದರು. ಆಗ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಸಹಿ ಮಾಡಿದ ಗ್ಯಾರಂಟಿ ಕಾರ್ಡ್ ಹಂಚಿದ್ದರು. ಅದರಂತೆ ನಾವು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಕೇಂದ್ರದವರನ್ನ ಅಕ್ಕಿ ಕೊಡಿ ಎಂದರೆ ಕೊಡಲಿಲ್ಲ. ಬಿಜೆಪಿಯವರು ಹಾಗೂ ಕುಮಾರಸ್ವಾಮಿ ಹೋಗಿ ಅಕ್ಕಿ ಕೊಡಬೇಡಿ ಎಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಡಿ.ಕೆ ಸುರೇಶ್ ಕ್ರಿಯಾಶೀಲ ಸಂಸದರು, ಈ ಬಾರಿ ಎಲ್ಲರೂ ಡಿ.ಕೆ.ಸುರೇಶ್ ಅವರಿಗೆ ಆಶೀರ್ವಾದ ಮಾಡಬೇಕು. ನೀವು ಆಶೀರ್ವಾದ ಮಾಡಿದ್ರೆ ಲೋಕಸಭೆಯಲ್ಲೂ ನಾವೇ ಗೆಲ್ತೀವಿ. ಗ್ಯಾರಂಟಿ ಮುಂದುವರೆಸ್ತೀವಿ. ಬಿಜೆಪಿ-ಜೆಡಿಎಸ್‍ನವರಿಗೆ ತಾಕತ್ತಿದ್ರೆ ನಿಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ತಿರಸ್ಕಾರ ಮಾಡಿ ಎಂದು ಹೇಳುವಂತೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯ ಜನಪದ ಕಲಾವಿದ ವೆಂಕಪ್ಪ ಅಂಬಾಜಿಯವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Share This Article