ಗುರೂಜಿ ಹತ್ಯೆ ಪ್ರಕರಣ – ಹಂತಕರಿಂದ ಬೇನಾಮಿ ಆಸ್ತಿಯ ಮಾರಾಟದಲ್ಲಿ ಕೈ ಮುಖಂಡ ಭಾಗಿ

Public TV
3 Min Read

ಹುಬ್ಬಳಿ: ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆಗೆ ಪ್ರಮುಖ ಕಾರಣ ಬೇನಾಮಿ ಆಸ್ತಿ (Benami Property) ಮಾರಟವಾಗಿದ್ದು, ಗುರೂಜಿಗೆ ತಿಳಿಯದಂತೆ ಆರೋಪಿಗಳು ಬೇನಾಮಿ ಜಮೀನು ಮಾರಾಟ ಮಾಡಿರುವುದರಿಂದ ಹುಟ್ಟಿಕೊಂಡ ದ್ವೇಷ ಗುರೂಜಿ ಹತ್ಯೆಯಲ್ಲಿ ಕೊನೆಯಾಗಿದೆ. ಈ ಬೇನಾಮಿ ಆಸ್ತಿ ಮಾರಾಟ ಮಾಡಿಸಲು ಮುಂದಾದವರು ಓರ್ವ ಕಾಂಗ್ರೆಸ್ ಮುಖಂಡ (Congress Leader) ಅಂತ ಈಗ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಇದು ಕೇವಲ ಜಮೀನು ಮಾರಾಟ ಅಲ್ಲ, ಗುರೂಜಿ ಕೊಲೆ ಸುಪಾರಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ (Deepak Chinchore) ಇದರ ಪ್ರಮುಖ ರೂವಾರಿ ಎಂಬುದು ತಿಳಿದುಬಂದಿದೆ.

ದೀಪಕ್ ಚಿಂಚೋರೆ ತನ್ನ ಆಪ್ತ ತಾನಾಜಿ ಶಿರ್ಕೆಗೆ, ಹಂತಕರಿಗೆ ಒಂದಿಷ್ಟು ಹಣ ಅಡ್ವಾನ್ಸ್ ಕೊಟ್ಟು ಗುರೂಜಿ ಬೇನಾಮಿ ಆಸ್ತಿ ಕೊಡಿಸಿದ್ದರು. ರಿಜಿಸ್ಟ್ರೇಷನ್ ಬಳಿಕ ಪೂರ್ತಿ ಹಣ ನೀಡುವ ಮಾತುಕತೆಯಾಗಿತ್ತು. ಇಷ್ಟೊತ್ತಿಗಾಗಲೇ ಈ ವಿಚಾರ ತಿಳಿದು ಗುರೂಜಿ ಮತ್ತು ಕುಟುಂಬಸ್ಥರು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ಇದರಿಂದಾಗಿ ಆಸ್ತಿ ಮಾರಾಟದ ಬಳಿಕ ಬರಬೇಕಿದ್ದ ಪೂರ್ತಿ ಹಣ ಹಂತಕರ ಕೈಗೆ ತಲುಪಿರಲಿಲ್ಲ. ಅಲ್ಲದೆ ಆಸ್ತಿ ಖರೀದಿಸಿದ್ದ ದೀಪಕ್ ಚಿಂಚೋರೆ, ಕೋರ್ಟ್ ಕೇಸ್ ಪರಿಹರಿಸಿ ಕೊಡಿ, ಇಲ್ಲದಿದ್ದರೆ ಹಣ ಮರಳಿ ಕೊಡುವಂತೆ ಒತ್ತಡ ಸಹ ಹಾಕಿದ್ದರು. ಇದರಿಂದಾಗಿ ಆರೋಪಿಗಳು ದೀಪಕ್ ಚಿಂಚೋರೆ ಮೇಲೂ ಸಹ ಅಸಮಾಧಾನಗೊಂಡಿದ್ದರು.

ಹೀಗಾಗಿ ದೀಪಕ್ ಚಿಂಚೋರೆಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಚಂದ್ರಶೇಖರ್ ಗುರೂಜಿಯನ್ನು ಹತ್ಯೆಗೈಯುವ ವಿಚಾರವಾಗಿ ವಾಟ್ಸಪ್ ಮೆಸೇಜ್ ಮಾಡಿರುವ ಮಹಾಂತೇಶ್ ಶಿರೂರು ಅದರಲ್ಲಿ ಹತ್ಯೆಯನ್ನು ಮಾಡಿಸಲು ನೀವೇ ಡಿಲ್ ಕೊಟ್ಟಿದ್ದೀರಿ ಅಂತ ಹೇಳಿಕೊಂಡಿದ್ದಾನೆ.

ಮೇ 10 ರಂದು ರಾತ್ರಿ 11:59ಕ್ಕೆ ಹಂತಕ ಮಹಾಂತೇಶ್ ದೀಪಕ್ ಚಿಂಚೋರೆಗೆ ತನ್ನದೇ ಮೊಬೈಲ್ ಸಂಖ್ಯೆಯಿಂದ ದೀಪಕ್ ಚಿಂಚೋರೆ ನಂಬರ್‌ಗೆ ಈ ರೀತಿಯಲ್ಲಿ ಮೊದಲ ಮೆಸೇಜ್ ಮಾಡಿದ್ದಾನೆ. ನಮಸ್ಕಾರ ಅಣ್ಣಾವರೆ, ನೀವು ಗುರೂಜಿ ಹೊಡೆಯಾಕ ಡೀಲ್ ಕೊಟ್ಟಿದ್ದರಲ್ಲ ಅದರ ಬಗ್ಗೆ ಮಾತನಾಡಬೇಕು ಎಂದು ಬರೆಯಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್‍ನವರು ನಿಷ್ಪಪ್ರಯೋಜಕ, ಅಪ್ರಯೋಜಕ ಅಂತ ನಾವು ಹೇಳೋದಿಲ್ಲ: ಪ್ರಹ್ಲಾದ್ ಜೋಶಿ ಲೇವಡಿ

ಇದಾದ ಬಳಿಕ ಮಾರನೇ ದಿನ ಮಧ್ಯರಾತ್ರಿ 12 ಗಂಟೆಗೆ 2 ಮೆಸೇಜ್ ಕಳಿಸಿದ್ದ. ಅದರಲ್ಲಿ ಮೊದಲು ಪೋನ್ ರಿಸಿವ್ ಮಾಡ್ರಿ ಅಣ್ಣವರೇ, ನೀವು ಚಂದ್ರಶೇಖರ್ ಗುರೂಜಿ ಬೆನಾಮಿ ಪ್ರಾಪರ್ಟಿ ಹಿಡಿದಿದ್ದರ ಬಗ್ಗೆ ಗುರೂಜಿನ ಹೊಡೆಯೋಕೆ ಹೇಳಿದ್ದರಲ್ಲ ಅದರ ಬಗ್ಗೆ ಮಾತನಾಡಬೇಕಿತ್ತು. ನೀವು ಈ ಪೋನಲ್ಲಿ ಮಾತನಾಡಬೇಡ ಎಂದಿದ್ದಿರಿ. ಯಾವಾಗ, ಎಲ್ಲಿ ಭೇಟಿಯಾಗೋಣ ಹೇಳಿ ಅಣ್ಣಾವರೆ ಅಂತ ಮಹಾಂತೇಶ್ ಮೆಸೇಜ್ ಮಾಡಿದ್ದ.

ಮಹಾಂತೇಶ್ ಕಳಿಸಿದ ಮೆಸೇಜ್ ನೋಡಿದ ಬಳಿಕ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ, ಬೆಳಗ್ಗಿನ ಜಾವ ಪ್ರತಿಕ್ರಿಯಿಸಿ, ಮೂರ್ಖರಂತೆ ಮಾತನಾಡುವುದನ್ನು ನಿಲ್ಲಿಸಿ, ನಾನು ನನ್ನ ಜೀವನದಲ್ಲಿ ಎಂದಿಗೂ ತಪ್ಪು ಕೆಲಸಗಳನ್ನು ಮಾಡಿಲ್ಲ. ನನ್ನನ್ನು ಕೆಟ್ಟವನಂತೆ ತೋರಿಸುವ ಹುನ್ನಾರ ಮಾಡುತ್ತಿದ್ದು, ಆಧಾರರಹಿತ ಮಾತುಗಳನ್ನಾಡುತ್ತಿದ್ದೀರಿ. ನಾನು ನಿಮ್ಮಿಂದ ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನನ್ನ ಖ್ಯಾತಿಯನ್ನು ಹಾಳು ಮಾಡುವ ಪ್ರಯತ್ನವನ್ನು ನಿಲ್ಲಿಸಿ. ನಾನು ಮುಗ್ಧ ವ್ಯಕ್ತಿಯಾಗಿದ್ದು, ನಿಮ್ಮ ವರ್ತನೆ ನನ್ನನ್ನು ಅಪರಾಧಿಯಂತೆ ತೋರಿಸುತ್ತಿದೆ. ನಾನು ನನ್ನ ಜೀವನದಲ್ಲಿ ಎಂದೂ ತಪ್ಪು ಮಾಡಿಲ್ಲ ಎಂದು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್

ಅಷ್ಟೇ ಅಲ್ಲದೆ ಮಹಾಂತೇಶ್ ಶಿರೂರು ಮಾಡಿದ ವಾಟ್ಸಪ್ ಮೆಸೇಜ್ ವಿಚಾರವನ್ನು ದೀಪಕ್ ಚಿಂಚೋರೆ ಗುರೂಜಿಯನ್ನು ಭೇಟಿಯಾಗಿ, ಅವರಿಗೂ ತಿಳಿಸಿದ್ದರಂತೆ. ಆದರೆ ಗುರೂಜಿ ಮಾತ್ರ ಹಂತಕರ ಬಗ್ಗೆ ಎಚ್ಚರ ವಹಿಸಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *