ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

2 Min Read

-ಕೆಎಲ್‌ ರಾಹುಲ್‌ ಹೋರಾಟ ವ್ಯರ್ಥ

ನವದೆಹಲಿ: ಶುಭಮನ್‌ ಗಿಲ್‌ ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 1 ರನ್‌ನಿಂದ ಗೆಲವು ಸಾಧಿಸಿದೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಗುಜರಾತ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 210 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕೇವಲ 1 ರನ್‌ನಿಂದ ಸೋಲನುಭಸಿತು.

ಎರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಕೆಎಲ್‌ ರಾಹುಲ್‌ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದರು. 52 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸ್‌ ಬಾರಿಸಿ 92 ರನ್‌ಗಳಿಸಿದರು. ಪಾರುಮ್‌ ನಿಸ್ಸಾಂಕ 24 ಎಸೆತಗಳಲ್ಲಿ 41 ರನ್‌ ಗಳಿಸಿದರು. ಗಾಯದಿಂದಾಗಿ ಕ್ರೀಸ್‌ನಿಂದ ತೆರಳಿದ್ದ ಡೇವಿಡ್‌ ಮಿಲ್ಲರ್‌ ಮತ್ತೆ ಮರಳಿ 20 ಎಸೆತಗಳಲ್ಲಿ  41 ರನ್‌ ಗಳಿಸಿ ಆಪತ್ಭಾಂದವನಾದರು. ಕೈಬಿಡದೇ ಆಡಿದರೂ ಕೊನೆಯ 2 ಎಸೆತಗಳಲ್ಲಿ ಆಟವೇ ಬದಲಾಯಿತು. ಇನ್ನುಳಿದಂತೆ
ವಿಪ್ರಾಜ್‌ 12, ಸ್ಟಬ್ಸ್‌ 7, ನಿತೀಶ್‌ ರಾಣಾ 5, ಅಕ್ಷರ್‌ ಪಟೇಲ್‌ 2, ಕುಲದೀಪ್‌ ಯಾದವ್‌ 1 ರನ್‌ ಗಳಿಸಿದರು.

ಗುಜರಾತ್‌ ಪರ ಬೌಲಿಂಗ್‌ ಮಾಡಿದ ರಶೀದ್‌ ಖಾನ್‌ 3, ಪ್ರಸಿದ್ಧ್‌ ಕೃಷ್ಣ 2 ಹಾಗೂ ಮೊಹಮ್ಮದ್‌ ಸಿರಾಜ್‌ ಒಂದು ವಿಕೆಟ್‌ ಪಡೆದುಕೊಂಡರು.

ಆರಂಭದಿಂದಲೂ ಬಿರುಸಿನ ಆಟವನ್ನಾಡಿದ ಗುಜರಾತ್‌ ಸಿಕ್ಸ್‌, ಬೌಂಡರಿಗಳ ಸುರಿಮಳೆಯನ್ನೇ ಸುರಿಸಿತು. ನಾಯಕ ಗಿಲ್, ಸುಂದರ್‌ ಹಾಗೂ ಬಟ್ಲರ್‌ ಅಬ್ಬರದ ಆಟಕ್ಕೆ ದೆಹಲಿ ಬೌಲರ್‌ಗಳನ್ನೇ ದಂಡಿಸಿದರು. ಶುಭಮನ್‌ ಗಿಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ 61 ಎಸೆತಗಳಲ್ಲಿ 104ರನ್‌ಗಳ ಜೊತೆಯಾಟ ಆಡಿದರು. ಗಿಲ್‌ 45 ಎಸೆತಗಳಲ್ಲಿ 70 ರನ್‌, ಸುಂದರ್‌ 32 ಎಸೆತಗಳಲ್ಲಿ 55 ರನ್‌, ಜೋಸ್‌ ಬಟ್ಲರ್‌ 27 ಎಸೆತಗಳಲ್ಲಿ 52 ರನ್‌ ಗಳಿಸಿದರು. ಇನ್ನುಳಿದಂತೆ ಸಾಯಿ ಸುದರ್ಶನ್‌ 12, ಗ್ಲೆನ್‌ ಫಿಲಿಪ್ಸ್‌ 14 ಹಾಗೂ ರಾಹುಲ್‌ 1 ರನ್‌ ಗಳಿಸಿದರು.

ಡೆಲ್ಲಿ ಪರ ಬೌಲಿಂಗ್‌ ಮಾಡಿದ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರು. ಲುಂಗಿ, ಕುಲದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article