ಅಮ್ಮನ ಅಕ್ರಮ ಸಂಬಂಧದಿಂದ ರೊಚ್ಚಿಗೆದ್ದು ಪ್ರಿಯಕರನ ಕೊಂದು, ಕರುಳನ್ನು ಕೊಚ್ಚಿ ಎಸೆದ ಮಕ್ಕಳು!

Public TV
1 Min Read

ಗಾಂಧಿನಗರ: ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ತಮ್ಮ ತಾಯಿಯ ಪ್ರಿಯಕರನನ್ನು (Lover) ಇಬ್ಬರು ಸಹೋದರರು ಅಮಾನುಷವಾಗಿ ಹತ್ಯೆಗೈದ ಘಟನೆ ನಡೆದಿದೆ.

ಸಂಜಯ್ ಠಾಕೂರ್ (27) ಮತ್ತು ಜಯೇಶ್ ಠಾಕೂರ್ (23) ಎಂಬವರು ತಮ್ಮ ತಾಯಿಯ ಪ್ರಿಯಕರ ರತಂಜಿ ಠಾಕೂರ್ (53) ಎಂಬಾತನನ್ನು ಜ.26ರಂದು ಹತ್ಯೆಗೈದಿದ್ದರು. ಆತ ಕೆಲಸ ಮಾಡುತ್ತಿದ್ದ ಜಾಗದಲ್ಲೇ ಆತನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಚುಚ್ಚಿದ್ದರು. ಕರಳು ಹೊರ ಬಂದ ಬಳಿಕ, ಅದನ್ನು ಕತ್ತರಿಸಿ ಮೇಲೆ ಏಸೆದು ವಿಕೃತಿ ಮೆರೆದಿದ್ದರು.

ಆರೋಪಿಗಳು, ಹತ್ಯೆಗೀಡಾದ ವ್ಯಕ್ತಿ ತಮ್ಮ ತಾಯಿಯೊಂದಿಗೆ ಸಂಬಂಧ ಹೊಂದಿರುವುದು ಅವರ ಮೃತ ತಂದೆಗೆ ಅವಮಾನ ಎಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಈ ಸಂಬಂಧ ರತಂಜಿ ಠಾಕೂರ್ ಮಗ ಅಜಯ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತಾಡಿರುವ ಅಜಯ್, ಇಬ್ಬರು ಸಹೋದರರು ಈ ಹಿಂದೆ ತನ್ನ ತಂದೆಗೆ, ಅವರ ತಾಯಿಯಿಂದ ದೂರವಿರಲು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಹಲವಾರು ಬಾರಿ ಜಗಳ ಸಹ ನಡೆದಿತ್ತು. ವಿವಾದದ ನಂತರ ಗ್ರಾಮಸ್ಥರು ಈ ವಿಷಯದ ಬಗ್ಗೆ ಪಂಚಾಯತ್ ಕೂಡ ನಡೆಸಿದ್ದರು, ಆದರೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಕೊಲೆಯ ನಂತರ ಆರೋಪಿಗಳು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ಅವರ ಮೊಬೈಲ್ ಲೊಕೇಶನ್‌ ಆಧಾರದ ಮೇಲೆ ಪತ್ತೆಹಚ್ಚಿ, ಘಟನೆ ನಡೆದ ಕೆಲವೇ ಗಂಟೆಗಳ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Share This Article