ಭಾರತದ ಪ್ರಗತಿಗೆ ಗುಜರಾತ್‌ ವಿಶೇಷ ಕೊಡುಗೆ ನೀಡಿದೆ – ರಾಹುಲ್‌ ಗಾಂಧಿ

Public TV
1 Min Read

ನವದೆಹಲಿ: ಗುಜರಾತ್ (Gujarat Day) ತನ್ನ ಸಂಸ್ಥಾಪನಾ ದಿನವನ್ನು ಮೇ 1 ರಂದು “ಗುಜರಾತ್ ಗೌರವ ದಿನ” ಎಂದು ಆಚರಿಸುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಗುಜರಾತ್ ಜನತೆಗೆ ಶುಭಾಶಯ ತಿಳಿಸಿದ್ದಾರೆ.

ಸೋಮವಾರ ಟ್ವೀಟ್‌ ಮಾಡಿರುವ ಅವರು, “ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರ ಜನ್ಮಸ್ಥಳವಾದ ಗುಜರಾತ್ ಭಾರತದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ. ಗುಜರಾತ್ ದಿನದಂದು ಗುಜರಾತ್ ಜನತೆಗೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಜನರಿಗೆ ಶುಭಾಶಯ ತಿಳಿಸಿದ್ದಾರೆ. ಗುಜರಾತ್ ತನ್ನ ಸರ್ವತೋಮುಖ ಪ್ರಗತಿ ಮತ್ತು ಅದರ ವಿಶಿಷ್ಟ ಸಂಸ್ಕೃತಿಯಿಂದಾಗಿ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಮೈಲುಗಲ್ಲು ಸಾಧಿಸುತ್ತದೆ ಎಂದು ಹೇಳಿದ್ದಾರೆ.

ಮೇ 1, 1960 ರಂದು ಗುಜರಾತ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಗುಜರಾತಿಗಳು ಅದರತ್ತ ಮುನ್ನಡೆದಿದ್ದಾರೆ. ಅಭಿವೃದ್ಧಿ, ಭೂಕಂಪ, ಪ್ರವಾಹ, ಕೊರೊನಾ ಸಾಂಕ್ರಾಮಿಕ.. ಹೀಗೆ ನಾನಾ ವಿಪತ್ತುಗಳನ್ನು ಗುಜರಾತಿಗಳು ದೃಢಸಂಕಲ್ಪದಿಂದ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

ಪ್ರಧಾನಿ ನೇತೃತ್ವದಲ್ಲಿ ಗುಜರಾತ್ ಅಭಿವೃದ್ಧಿಯ ಮಾದರಿ ರಾಜ್ಯ ಎಂದು ದೇಶ ಮತ್ತು ಜಗತ್ತಿಗೆ ತೋರಿಸಿದೆ. ಗುಜರಾತ್‌ನ ಈ ಅಭಿವೃದ್ಧಿ ಪಯಣವನ್ನು ಮುಂದುವರಿಸಲು ನಮಗೆ ಜನಾದೇಶವೂ ಇದೆ. ಎಲ್ಲಾ ಜನರ ಪ್ರೀತಿಯ ಋಣ ನಮ್ಮ ಮೇಲಿದೆ ಎಂದು ಸ್ಮರಿಸಿದ್ದಾರೆ.

Share This Article