23 ರನ್‌ ಬಿಟ್ಟು ಕೊಟ್ರೂ ಕೊನೆಯಲ್ಲಿ ಸೋಫಿ ಮ್ಯಾಜಿಕ್‌ – ಗುಜರಾತ್‌ಗೆ ರೋಚಕ 3 ರನ್‌ ಜಯ

2 Min Read

ವಡೋದರಾ: ಸೋಫಿ ಡಿವೈನ್‌ (Sophie Devine) ಅವರು ಕೊನೆಯ ಓವರ್‌ನಲ್ಲಿ ಮ್ಯಾಜಿಕ್‌ ಮಾಡಿದ್ದರಿಂದ ಗುಜರಾತ್‌ ಜೈಂಟ್ಸ್‌ (Gujarat Giants) ಡೆಲ್ಲಿ ಕ್ಯಾಪಿಟಲ್‌ (Delhi Capitals) ವಿರುದ್ಧ ರೋಚಕ 3 ರನ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಗುಜರಾತ್‌ 9 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 8 ವಿಕೆಟ್‌ ನಷ್ಟಕ್ಕೆ 171 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು.

ಈ ಗೆಲುವಿನ ಮೂಲಕ ಗುಜರಾತ್‌ 8 ಅಂಕ ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ.  ಇದನ್ನೂ ಓದಿ: ಟಿ20 ವಿಶ್ವಕಪ್‌ | ಪಾಕ್‌ ಜಾಗದಲ್ಲಿ ಆಡುತ್ತಾ ಬಾಂಗ್ಲಾದೇಶ?

ಸೋಫಿ ಡಿವೈನ್‌ ಎಸೆದ 17 ನೇ ಓವರ್‌ನಲ್ಲಿ 23 ರನ್‌ (4,4,4,4,1ಲೆಗ್‌ ಬೈ,6) ಬಂದರೆ ಆಶ್ಲೇ ಗಾರ್ಡ್‌ನರ್‌ ಎಸೆದ 19ನೇ ಓವರ್‌ನಲ್ಲಿ 20 ರನ್‌ ಬಂದಾಗ ಪಂದ್ಯ ಡೆಲ್ಲಿ ಕಡೆ ವಾಲಿತ್ತು. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿತ್ತು. ಆದರೆ ಸೋಫಿ ಡಿವೈನ್‌ 20ನೇ ಓವರ್‌ನಲ್ಲಿ 5 ರನ್‌ ನೀಡಿ 2 ವಿಕೆಟ್‌ ಕೀಳುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಕನ್ನಡತಿ ನಿಕ್ಕಿ ಪ್ರಸಾದ್‌ 47 ರನ್‌(24 ಎಸೆತ, 9 ಬೌಂಡರಿ) ಸ್ನೇಹ ರಾಣಾ 29 ರನ್‌(15 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು.

ಗುಜರಾಥ್‌ ಪರ ಬೆಥ್‌ ಮೂನಿ 58 ರನ್‌, ಅನುಷ್ಕಾ ಶರ್ಮಾ 39, ಕೊನೆಯಲ್ಲಿ ತನುಜಾ ಕನ್ವರ್‌ 21 ರನ್‌ ಚಚ್ಚಿದ ಪರಿಣಾಮ 170 ರನ್‌ಗಳ ಗಡಿಯನ್ನು ದಾಟಿತ್ತು.

Share This Article