ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ

By
1 Min Read

ಗಾಂಧೀನಗರ: ಗುಜರಾತ್‌ನ ಕುಟುಂಬವೊಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡುವ ಮೂಲಕ ತಮ್ಮ ಪ್ರೀತಿಯ 12 ವರ್ಷದ ಕಾರಿಗೆ ವಿದಾಯ ಹೇಳಿದೆ. ಅಮ್ರೇಲಿ ಜಿಲ್ಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 1,500 ಮಂದಿ ಭಾಗವಹಿಸಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಲಕ್ಷಗಟ್ಟಲೆ ವೆಚ್ಚದಲ್ಲಿ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿತ್ತು, ಕಾರನ್ನು ಸಮಾಧಿ ಮಾಡುವ ಮುನ್ನ ವ್ಯಾಗನ್ ಆರ್ ಅನ್ನು ಹೂಮಾಲೆಗಳಿಂದ ಅಲಂಕಾರಗಳಿಂದ ಅಲಂಕರಿಸಲಾಗಿತ್ತು. ಹಸಿರು ಬಟ್ಟೆಯಿಂದ ಹೊದಿಸಿದ ನಂತರ, ಸಾಂಪ್ರದಾಯಿಕ ಪೂಜೆಯನ್ನು ಮಾಡಿಲಾಯಿತು. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದಂತೆ ಗುಲಾಬಿ ದಳಗಳಿಂದ ಧಾರೆ ಎರೆದು ಸಮಾಧಿ ಮಾಡಲಾಯಿತು. ಜನರು ಈ ಕಾರ್ ವೈರಲ್ ಕ್ಲಿಪ್‌ಗಳನ್ನು ನೋಡಿ ‘ಲಕ್ಕಿ’ ಕಾರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಮಾರಂಭದ ಹಿಂದಿನ ಭಾವನಾತ್ಮಕ ಸಂಬಂಧವನ್ನು ಕಾರಿನ ಮಾಲೀಕ ಸಂಜಯ್ ಪಲ್ಲೋರ ವಿವರಿಸಿದರು. ಸೂರತ್‌ನಲ್ಲಿ ನಿರ್ಮಾಣ ವ್ಯವಹಾರ ನಡೆಸುತ್ತಿರುವ ಪಲ್ಲೋರ, ತಮ್ಮ ಕುಟುಂಬದ ಯಶಸ್ಸಿನಲ್ಲಿ ಕಾರು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ಈ ಕಾರನ್ನು ಸುಮಾರು 12 ವರ್ಷಗಳ ಹಿಂದೆ ಖರೀದಿಸಿದೆ. ಇದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿತು. ನಾವು ವ್ಯಾಪಾರದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದೇವೆ. ನಮ್ಮ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಅದನ್ನು ಮಾರಾಟ ಮಾಡುವ ಬದಲು, ಅದು ನಮಗೆ ತಂದ ಅದೃಷ್ಟಕ್ಕೆ ಗೌರವವಾಗಿ ‘ಸಮಾಧಿ’ ನೀಡಲು ನಾವು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪಲ್ಲೋರ ಹೇಳಿದರು.

Share This Article