ಗುಜರಾತ್ ವಿಧಾನಸಭೆ ಚುನಾವಣೆ – ಎಸ್‍ಸಿ, ಎಸ್‍ಟಿ ಮತ ಸೆಳೆಯಲು ಬಿಜೆಪಿ ತಂತ್ರ

Public TV
1 Min Read

ನವದೆಹಲಿ: ಡಿಸೆಂಬರ್ 1 ಮತ್ತು 5 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ (Assembly Election) ಎಸ್‍ಸಿ, ಎಸ್‍ಟಿ ಮತಗಳು ನಿರ್ಣಾಯಕವಾಗಲಿದ್ದು, ಈ ಮತಗಳನ್ನು ಸೆಳೆಯಲು ಬಿಜೆಪಿ (BJP) ವಿಶೇಷ ಪ್ರಯತ್ನ ಮಾಡುತ್ತಿದೆ. ಕಳೆದ ಎರಡು ಚುನಾವಣೆಗಳಲ್ಲಿ ಯಾವುದೇ ಪಕ್ಷವೂ ಪ್ರಾಬಲ್ಯ ಸಾಧಿಸಲು ಸಾಧ್ಯವಾಗದ ಬಿಜೆಪಿ ಈ ಬಾರಿ ಹಿಡಿತ ಸಾಧಿಸುವ ಪ್ರಯತ್ನದಲ್ಲಿದೆ.

2012ರಲ್ಲಿ ಕಚ್, ಉತ್ತರ ಮತ್ತು ಮಧ್ಯ ಗುಜರಾತ್ (Gujarat), ಅಹಮದಾಬಾದ್ (Ahmedabad) – ಗಾಂಧಿನಗರ (Gandhinagar) ನಗರ ಪ್ರದೇಶದಲ್ಲಿ ಹರಡಿರುವ ಹೆಚ್ಚಿನ ಎಸ್‍ಸಿ ಸ್ಥಾನಗಳಲ್ಲಿ ಜನರು ಬಿಜೆಪಿಗೆ ಒಲವು ತೋರಿದರು. 20 ಎಸ್‍ಸಿ ಸ್ಥಾನಗಳಲ್ಲಿ ಕೇಸರಿ ಪಕ್ಷ 15 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 5 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ 2017ರ ಚುನಾವಣೆಯಲ್ಲಿ ವಿಭಿನ್ನ ಚಿತ್ರಣ ಕಂಡು ಬಂದಿದ್ದು, ಕಾಂಗ್ರೆಸ್ (Congress) 10 ಸ್ಥಾನಗಳನ್ನು ಪಡೆದರೆ ಬಿಜೆಪಿ 9ಕ್ಕೆ ತೃಪ್ತಿಪಡಬೇಕಾಯಿತು. ಇದನ್ನೂ ಓದಿ: ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ

ಗುಜರಾತ್‍ನ 32 ಎಸ್‍ಟಿ ಸ್ಥಾನಗಳಲ್ಲಿ ಹೆಚ್ಚಿನವು ಮಧ್ಯಪ್ರದೇಶದ ಗಡಿಯ ಅಂಚಿನಲ್ಲಿದೆ. 2012 ಮತ್ತು 2017ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತಗಳು ಸಮನಾಗಿ ವಿಭಜನೆಯಾಗಿದೆ. ಬಿಜೆಪಿ 2012ರಲ್ಲಿ 15 ಸ್ಥಾನಗಳನ್ನು, ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದುಕೊಂಡಿತು. 2017ರಲ್ಲಿ ಬಿಜೆಪಿಯ ಸಂಖ್ಯೆಯು 14ಕ್ಕೆ ಕುಸಿದರೆ, ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿತ್ತು. ಇದನ್ನೂ ಓದಿ: ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗ್ತಿದ್ದು, ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ: ಸಿಟಿ ರವಿ

ಈ ಬಾರಿ ಬಿಜೆಪಿಯು ಹಲವಾರು ಯೋಜನೆಗಳೊಂದಿಗೆ ಬುಡಕಟ್ಟು ಜನಾಂಗದವರನ್ನು ಓಲೈಸುತ್ತಿದೆ ಮತ್ತು ದ್ರೌಪದಿ ಮುರ್ಮು ಅವರ ಮೊದಲ ಬುಡಕಟ್ಟು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ ಲಾಭ ಪಡೆಯುತ್ತಿದೆ. ಈ ಭಾಗದಲ್ಲಿ ದೇಶದ ಬೇರೆ, ಬೇರೆ ಭಾಗದಲ್ಲಿರುವ ಸಮುದಾಯದ ನಾಯಕರ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಈ ಅಂಶಗಳು ಬುಡಕಟ್ಟು ಮತದಾರರಲ್ಲಿ ಹೇಗೆ ಪ್ರತಿಧ್ವನಿಸುತ್ತವೆ ಎಂಬುದು ಕುತೂಹಲಕಾರಿಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *