ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ

Public TV
2 Min Read

ನವದೆಹಲಿ: ಬಿಜೆಪಿ ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಕಠಿಣ ನಿರ್ಣಯಗಳನ್ನು ಕೈಗೊಳ್ಳಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ನವದೆಹಲಿಯಲ್ಲಿ (NewDelhi) ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ಗುಜರಾತ್ ಚುನಾವಣಾ (Gujarat Election) ವಿಜಯೋತ್ಸವದ ನೇತೃತ್ವ ವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ದೆಹಲಿ, ಗುಜರಾತ್ ಮತ್ತು ಹಿಮಾಚಲದ ಜನರಿಗೆ ಧನ್ಯವಾದ ಹೇಳುತ್ತೇನೆ. ಬಿಜೆಪಿಗೆ ದೇಶಾದ್ಯಂತ ಪ್ರೀತಿ ವ್ಯಕ್ತವಾಗುತ್ತಿದೆ. ಗುಜರಾತಿನಲ್ಲಷ್ಟೇ ಅಲ್ಲ, ಉತ್ತರ ಪ್ರದೇಶದ ರಾಂಪುರದ ಉಪಚುನಾವಣೆಯಲ್ಲಿಯೂ ನಾವು ದೊಡ್ಡ ಗೆಲುವು ಸಾಧಿಸಿದ್ದೇವೆ. ಈ ಬಾರಿಯ ಚುನಾವಣೆಗಳಲ್ಲಿ ಜನರು ಪ್ರಜಾಪ್ರಭುತ್ವದ ಹಬ್ಬವನ್ನು ನಿಜವಾಗಿ ಆಚರಿಸಿದ್ದು, ಒಂದೇ ಒಂದು ಬೂತ್‌ನಲ್ಲಿಯೂ ಮರು ಚುನಾವಣೆ ಅಥವಾ ಮರು ಮತದಾನದ ಅವಶ್ಯಕತೆ ಇಲ್ಲದಂತೆ ನೋಡಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ಬಿಜೆಪಿ ತೆಗೆದುಕೊಳ್ಳುವ ದಿಟ್ಟ ಹಾಗೂ ಕಠಿಣ ನಿರ್ಧಾರದಿಂದಾಗಿ ಈ ದೇಶದ ಜನರು ಬಿಜೆಪಿಯನ್ನು ಇಷ್ಟು ಪ್ರೀತಿಸುತ್ತಾರೆ. ಇದರಿಂದಲೇ ಬಿಜೆಪಿಗೆ ದಿನೇ ದಿನೇ ಬೆಂಬಲ ಹಾಗೂ ನಂಬಿಕೆ ಎರಡು ಹೆಚ್ಚಾಗುತ್ತಿದೆ ಎಂದ ಅವರು, ಗುಜರಾತ್‌ನಲ್ಲಿ ಬಿಜೆಪಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದೆ. 25 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಗುಜರಾತ್‌ನ ಜನರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಗೇ ಉಳಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಅವರು ಎಲ್ಲಾ ದಾಖಲೆಗಳನ್ನು ಮುರಿದು, ಹೊಸ ಇತಿಹಾಸವನ್ನು ಬರೆದಿದ್ದಾರೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಎಲ್ಲ ವರ್ಗದ, ಎಲ್ಲ ಜಾತಿ, ಧರ್ಮದ ಜನರು ಒಗ್ಗೂಡಿ ಬಿಜೆಪಿಗೆ ಮತ ಹಾಕಿದ್ದಾರೆ. ಯುವಕರು ಕೂಡ ಬಿಜೆಪಿ ಮೇಲೆ ಮತ ಚಲಾಯಿಸಿದ್ದಾರೆ ಎಂದ ಅವರು, ಗುಜರಾತ್‌ ಸಮಯದಲ್ಲಿ ಈ ಬಾರಿ ನರೇಂದ್ರ ಮೋದಿಯ ದಾಖಲೆಯನ್ನು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಾಟೇಲ್‌ ಅವರು ಮುರಿಯುತ್ತಾರೆ. ಮೋದಿ ಇದಕ್ಕೆ ಸಹಕರಿಸುತ್ತಾರೆ ಎಂದು ಹೇಳಿದ್ದೆ. ಇದೀಗ ಅದು ನಿಜವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂದು ಭೂಪೇಂದ್ರ ಪಟೇಲ್ ಅವರು ತಮ್ಮ ಸ್ಥಾನವನ್ನು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಇದು ಅಸಾಧಾರಣವಾಗಿದೆ. 2 ಲಕ್ಷ ಮತಗಳಿಂದ ಅಸೆಂಬ್ಲಿ ಸ್ಥಾನವನ್ನು ಗೆಲ್ಲುವುದು ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಿನವರಿಗೆ ಆಗುವುದಿಲ್ಲ ಎಂದು ಹೇಳಿದರು. ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಹಿಮಾಚಲ ಜನತೆಗೆ ಧನ್ಯವಾದ ಅರ್ಪಿಸೋದನ್ನು ಮರೆಯಲಿಲ್ಲ. ಹಿಮಾಚಲದಲ್ಲಿ ನಾವು ಕಾಂಗ್ರೆಸ್ಸಿಗಿಂತ ಕೇವಲ 1 ಪರ್ಸೆಂಟ್‌ಗಿಂತ ಕಡಿಮೆ ಮತ ಪಡೆದಿದ್ದೇವೆ. ಆದ್ರೆ ನಾವು ಹಿಮಾಚಲವನ್ನು ಮರೆಯಲ್ಲ. ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದು ಘೋಷಿಸಿದರು. ಇದನ್ನೂ ಓದಿ: 5 ರಾಜ್ಯಗಳ ಉಪ ಚುನಾವಣೆ – ಕಾಂಗ್ರೆಸ್‌, ಬಿಜೆಪಿಗೆ ತಲಾ 2 ಸೀಟ್‌

ರಾಷ್ಟ್ರದ ಹಿತಕ್ಕಾಗಿ ಹಾಗೂ ಜನತೆಗಾಗಿ ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿ ಎಲ್ಲಾ ವರ್ಗದವರನ್ನು ಹೊಂದಿದ್ದು, ಮಹಿಳೆ ಹಾಗೂ ಪುರುಷರನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿಗೆ ಮಹಿಳೆಯರ ಪ್ರಗತಿಯೇ ಮುಖ್ಯ ಧ್ಯೇಯವಾಗಿದೆ ಎಂದ ಅವರು, ಶಾರ್ಟ್‌ಕಟ್‌ ರಾಜಕೀಯವು ರಾಷ್ಟ್ರವನ್ನು ಹಾನಿಹೊಳಿಸುತ್ತದೆ ಎಂಬುದನ್ನು ಈಗಾಗಲೇ ಜನರು ಅರ್ಥ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರತಿಯೊಂದು ನಿರ್ಧಾರವು ಹಾಗೂ ಯೋಜನೆಯು ದೂರದೃಷ್ಟಿತ್ವವನ್ನು ಹೊಂದಿದೆ. ಇದನ್ನೂ ಓದಿ: ಡಿ.12ರಂದು ಮೋದಿ ಸ್ಟೇಡಿಯಂನಲ್ಲಿ ಪ್ರಮಾಣವಚನ – ಮೋದಿ, ಶಾ ಭಾಗಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *