ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿ – ಕೊಟ್ಟ ಮಾತು ಉಳಿಸಿಕೊಳ್ತೀವಿ: ಡಿಕೆಶಿ

Public TV
1 Min Read

– ಪ್ರಮಾಣವಚನ ಕಾರ್ಯಕ್ರಮಕ್ಕೆ ಬಿಜೆಪಿ, ಜೆಡಿಎಸ್ ನಾಯಕರಿಗೆ ಆಹ್ವಾನ

ಬೆಂಗಳೂರು: ಮೊದಲ ಕ್ಯಾಬಿನೆಟ್‌ನಲ್ಲಿಯೇ ಗ್ಯಾರಂಟಿಯನ್ನು (Guarantee) ಜಾರಿಗೊಳಿಸುತ್ತೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭರವಸೆ ನೀಡಿದ್ದಾರೆ.

ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಶನಿವಾರದಿಂದ ಜನರ ಆಡಳಿತ, ಜನರ ಧ್ವನಿ ಸರ್ಕಾರ ರಚನೆ ಆಗುತ್ತಿದೆ. ರಾಜ್ಯದ ಜನತೆಗೆ, ಕಾರ್ಯಕರ್ತರು, ಮುಖಂಡರಿಗೆ, ಬೆಂಬಲ ಕೊಟ್ಟವರಿಗೆ ಇದಕ್ಕಾಗಿ ಧನ್ಯವಾದ ಹೇಳುತ್ತೇನೆ ಎಂದರು.

ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟ್ರದ ಅನೇಕ ನಾಯಕರು ಬರುತ್ತಿದ್ದಾರೆ. ಕಾರ್ಯಕರ್ತರು ವಾಹನ ಮಾಡಿಕೊಂಡು ಬರಬೇಕು. ಜೆಡಿಎಸ್, ಬಿಜೆಪಿ ನಾಯಕರೂ ಬರಬೇಕು. ಎಲ್ಲರೂ 11 ಗಂಟೆ ಒಳಗಡೆ ಕಂಠೀರವ ಕ್ರೀಡಾಂಗಣದ ಬಳಿ ಬರಬೇಕಾಗಿ ರಾಜ್ಯದ ಮುಖಂಡರಿಗೆ ಮನವಿ ಮಾಡುತ್ತೇನೆ ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡಿದರು.

ನಾನು ಸಿದ್ದರಾಮಯ್ಯ ಹಾಗೂ ಸುರ್ಜೇವಾಲ ಅವರೊಂದಿಗೆ ಕ್ಯಾಬಿನೆಟ್ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಕೊಟ್ಟ ಗ್ಯಾರಂಟಿಯನ್ನು ಜಾರಿ ಮಾಡುವ ಮೂಲಕ ನಾವು ಮಾತು ಈಡೇರಿಸುತ್ತೇವೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಮನೆಯೊಡತಿಗೆ ಹಣ ನೀಡುವ ಭರವಸೆ ಪ್ರಿಯಾಂಕಾ ಗಾಂಧಿ ನೀಡಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಗೃಹಜೋತಿ ಬಗ್ಗೆ ಭರವಸೆ ನೀಡಿದ್ದೇವೆ. ಬಸ್ ಪಾಸ್ ಬಗ್ಗೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ ಪಕ್ಷದ ಒಮ್ಮತದ ಗ್ಯಾರಂಟಿ. ಇವೆಲ್ಲವನ್ನೂ ಈಡೇರಿಸುತ್ತೇವೆ ಎಂದರು. ಇದನ್ನೂ ಓದಿ: ರಾಜಕೀಯ ಒತ್ತಡದ ನಡುವೆಯೂ IPL ವೀಕ್ಷಿಸಿ ರಿಲ್ಯಾಕ್ಸ್ ಆದ ನೂತನ ಸಿಎಂ ಸಿದ್ದರಾಮಯ್ಯ

ಜೂನ್ 1 ರಿಂದ ಕರೆಂಟ್ ಬಿಲ್ ಕಟ್ಟಲ್ಲ ಎಂಬ ಜನರ ವಾದ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಡಿಕೆಶಿ, ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದಷ್ಟೇ ಹೇಳಿ ಗ್ಯಾರಂಟಿ ಜಾರಿಗೆ ಕಂಡೀಷನ್ಸ್ ಬಗ್ಗೆ ಸ್ಪಷ್ಟತೆ ನೀಡದೇ ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ಇಂದು ಮತ್ತೆ ದೆಹಲಿಯತ್ತ ಸಿದ್ದರಾಮಯ್ಯ, ಡಿಕೆಶಿ- ಸಚಿವರ ಪಟ್ಟಿ ಅಂತಿಮಕ್ಕೆ ಸರ್ಕಸ್

Share This Article