ನವೆಂಬರ್‌ನಲ್ಲಿ 1.31 ಲಕ್ಷ ಕೋಟಿ ರೂ. ಆದಾಯ ಸಂಗ್ರಹ – GST ಜಾರಿಯಾದ ಬಳಿಕ ಎರಡನೇ ಅತಿ ಹೆಚ್ಚು ಕಲೆಕ್ಷನ್

Public TV
1 Min Read

ನವದೆಹಲಿ: ಅನ್‍ಲಾಕ್ ಬಳಿಕ ದೇಶದ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದ್ದು, ನವೆಂಬರ್‌ನಲ್ಲಿ ದಾಖಲೆ ಪ್ರಮಾಣದ ಜಿಎಸ್‍ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಹಣಕಾಸು ಇಲಾಖೆಯ ಅಂಕಿ ಅಂಶಗಳ ಪ್ರಕಾರ ನವೆಂಬರ್ ತಿಂಗಳಲ್ಲಿ 1,31,526 ಕೋಟಿ ರೂ. ಆದಾಯ ಜಿಎಸ್‍ಟಿ ಮೂಲಕ ಸಂಗ್ರಹವಾಗಿದೆ.

ದೇಶದಲ್ಲಿ ಜಿಎಸ್‍ಟಿ ಜಾರಿಯಾದ ಬಳಿಕ ಎರಡನೇ ಬಾರಿ ಅತಿ ಹೆಚ್ಚಿನ ಪ್ರಮಾಣದ ಆದಾಯ ಸಂಗ್ರಹವಾಗಿದೆ ಎಂದು ಇಲಾಖೆ ಹೇಳಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 25% ಮತ್ತು 2019-20ಕ್ಕೆ ಹೋಲಿಸಿದರೆ 27% ನಷ್ಟು ಜಿಎಸ್‍ಟಿ ಹೆಚ್ಚು ಸಂಗ್ರಹವಾಗಿದೆ.

ನವೆಂಬರ್‌ನಲ್ಲಿ ಕೇಂದ್ರದ ಮೂಲಕ 23,978 ಕೋಟಿ ರೂ. ಮತ್ತು 31,127 ಕೋಟಿ ರೂ. ರಾಜ್ಯಗಳ ಮೂಲಕ ಸಂಗ್ರಹವಾಗಿದೆ. ಸರಕುಗಳ ಆಮದಿನ ಮೇಲೆ ಹೇರಲಾದ ತೆರಿಗೆಯಿಂದ 32,165 ಕೋಟಿ ರೂ., ಸೆಸ್ ಮೂಲಕ ಸಂಗ್ರಹಿಸಲಾದ 9,606 ಕೋಟಿ ರೂ. ಸೇರಿದಂತೆ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 653 ಕೋಟಿ ರೂ. ಸೇರಿ ಅಂತರಾಷ್ಟ್ರೀಯ ವ್ಯವಹಾರಗಳ ಮೂಲಕ 66,815 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

ಜಿಎಸ್‍ಟಿ ಆದಾಯ ಏರಿಕೆಗೆ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಆಡಳಿತತ್ಮಾಕ ಕ್ರಮಗಳು ಎನ್ನಲಾಗಿದೆ. ಅನುಮಾನಾಸ್ಪದ ತೆರಿಗೆದಾರರನ್ನು ಹುಡುಕಲು ರಿಟರ್ನ್, ಇನ್‍ವಾಯ್ಸ್ ಮತ್ತು ಇ-ವೇ ಬಿಲ್ ತಂತ್ರಜ್ಞಾನ ಬಳಸಿದ್ದು, ಇದು ದೊಡ್ಡ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿದೆ ಎಂದು ಸಹ ಕೊರೊನಾ ಕಾರಣದಿಂದ 2019-20 ರಲ್ಲಿ ಜಿಎಸ್‍ಟಿ ಒಂದು ಲಕ್ಷ ಕೋಟಿಯ ಗಡಿಯನ್ನು ದಾಟಿರಲಿಲ್ಲ. ಆದರೆ ಅನ್‍ಲಾಕ್ ಬಳಿಕ 2020-21ರ ಅವಧಿಯಲ್ಲಿ ಜಿಎಸ್‍ಟಿ ಆದಾಯ ಸಂಗ್ರಹ ಸುಧಾರಿಸಿದ್ದು, ಒಂದು ಲಕ್ಷ ಕೋಟಿಯ ಗಡಿ ದಾಟಿತ್ತು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Share This Article
Leave a Comment

Leave a Reply

Your email address will not be published. Required fields are marked *