ಬೆಂಗಳೂರು: ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಯುಪಿಐ ಸಂಬಂಧಿತ ನೋಟಿಸ್ ಮತ್ತು ಡಿಜಿಟಲ್ ಪಾವತಿಗಳಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುವ ತುರ್ತು ಅಗತ್ಯತೆಗೆ ಗಮನ ನೀಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ನೋಟಿಸ್‌ನಿಂದ ಸಣ್ಣ, ಪುಟ್ಟ ವ್ಯಾಪಾರಿಗಳು, ಬೇಕರಿಗಳು ಸೇರಿದಂತೆ ವರ್ತಕರ ತೊಂದರೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Breaking | ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ
ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ಡಿಜಿಟಲ್ ಪಾವತಿಗಳ ಪ್ರವರ್ತಕ ಎಂದು ಪ್ರಶಂಸಿಸಲ್ಪಡುತ್ತಿದೆ. ಈ ಸಮಯದಲ್ಲಿ, ಕರ್ನಾಟಕವು ಈ ಜಾಗತಿಕ ನಾಯಕತ್ವವನ್ನು ದುರ್ಬಲಗೊಳಿಸುವ, ಬೆದರಿಕೆಯೊಡ್ಡುವ ಆತಂಕಕಾರಿ ಪ್ರವೃತ್ತಿಯನ್ನು ನೋಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ VIP ಸಂಚಾರದ ವೇಳೆ ಸೈರನ್ ಬಳಕೆ ನಿಷೇಧ
ಇತ್ತೀಚೆಗೆ ನೀಡುತ್ತಿರುವ ನೋಟಿಸ್‌ಗಳ ಹೆಚ್ಚಳವು ಗೊಂದಲ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಯುಪಿಐ ವಹಿವಾಟು ದತ್ತಾಂಶದ ಆಧಾರದ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ಬೇಕರಿಗಳು, ಮಾರಾಟಗಾರರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ರಾಜ್ಯದ ದುರ್ಬಲ ಆರ್ಥಿಕ ಸ್ಥಿತಿ ಮತ್ತು ಹೆಚ್ಚುತ್ತಿರುವ ಆದಾಯದ ಒತ್ತಡಗಳು ತೆರಿಗೆ ಅಧಿಕಾರಿಗಳ ಮೇಲೆ ಅಸಮಂಜಸ ಗುರಿಗಳನ್ನು ವಿಧಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ F-35B ವಿಮಾನ ದುರಸ್ತಿ ಪೂರ್ಣ – ಮಂಗಳವಾರ ಯುಕೆಗೆ ವಾಪಸ್
ಟೋಲ್‌ನಂತೆಯೇ ತೆರಿಗೆ ಸಂಗ್ರಹಕ್ಕೆ ಇಳಿದಂತೆ ಕಾಣುತ್ತಿದೆ. ತೆರಿಗೆ ಗುರಿಗಳನ್ನು (GST) ತಲುಪುವ ಪ್ರಯತ್ನದಲ್ಲಿ, ಅನೇಕ ಅಧಿಕಾರಿಗಳು ಸಣ್ಣ ಮತ್ತು ಪ್ರಾಮಾಣಿಕ ವ್ಯಾಪಾರಿಗಳಿಗೆ ಕಿರುಕುಳ ನೀಡಿದ್ದಾರೆ. ಅವರಲ್ಲಿ ಹಲವರು ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ಕಾರ್ಮಿಕ ವರ್ಗದ ವಲಯವು ಕಷ್ಟಪಟ್ಟು ದುಡಿಯುವುದಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಗೆ ಬೆಂಬಲವಾಗಿದ್ದಾರೆ. ಅವರನ್ನು ಬೆಂಬಲಿಸುವ ಬದಲು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಬಗ್ಗೆ ಸದನದಲ್ಲಿ ಮುಂದಿನ ವಾರ ಚರ್ಚೆ – ಲೋಕಸಭೆಯಲ್ಲಿ 16 ಗಂಟೆ, ರಾಜ್ಯಸಭೆಯಲ್ಲಿ 9 ಗಂಟೆ ನಿಗದಿ
ಕಳೆದ ಮೂರು ವರ್ಷಗಳಿಂದ, ವಾಣಿಜ್ಯ ತೆರಿಗೆ ಇಲಾಖೆಯು ಈ ವ್ಯವಹಾರಗಳ ತೆರಿಗೆ ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಏನೂ ಮಾಡಿಲ್ಲ. ಅದರ ಬಗ್ಗೆ ಜಾಗೃತಿ ಮೂಡಿಸಲು ಅಥವಾ ಸಹಾಯ ಮಾಡಲೂ ಮುಂದಾಗಿಲ್ಲ. ಇದು ಕೇವಲ ಕೆಟ್ಟ ಅರ್ಥಶಾಸ್ತ್ರವಲ್ಲ, ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ದ್ರೋಹವಾಗಿದೆ. ಜಗತ್ತು ಭಾರತದ ಯುಪಿಐ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಕರ್ನಾಟಕದ ಸಣ್ಣ ವ್ಯಾಪಾರಿಗಳು ಭಯದಿಂದ ಕ್ಯೂಆರ್ ಕೋಡ್‌ಗಳನ್ನು ತೆಗೆದುಹಾಕಿ ನಗದು ವ್ಯವಹಾರಕ್ಕೆ ಮರಳುತ್ತಿದ್ದಾರೆ. ನಿಮ್ಮ ನಾಯಕತ್ವದ ಹಣಕಾಸು ಇಲಾಖೆ ಮೌನವಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್ ಕೆಳಗೆ ಹೂತಿದ್ದ ಪತ್ನಿ
ಸಣ್ಣ ವ್ಯಾಪಾರ ಪ್ರತಿನಿಧಿಗಳು, ಡಿಜಿಟಲ್ ಪಾವತಿ ಸೌಲಭ್ಯ ನೀಡುವವರು, ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಸೇರಿದಂತೆ ಎಲ್ಲಾ ಪಾಲುದಾರರ ತುರ್ತು ಸಭೆಯನ್ನು ತಕ್ಷಣವೇ ಕರೆಯಬೇಕೆಂದು ನಿಮ್ಮನ್ನು ಒತ್ತಾಯಿಸುತ್ತೇನೆ. ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿರುವ ಲಕ್ಷಾಂತರ ಸಣ್ಣ ಉದ್ಯಮಿಗಳನ್ನು ನಾವು ರಾಜ್ಯದ ಪ್ರಗತಿಯಲ್ಲಿ ದೂರವಿಡಲು ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ವಿರುದ್ಧ ಅಪಪ್ರಚಾರ ಮಾಡಿದ ವಿಪಕ್ಷಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ಸಿಎಂ