– ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ
– ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು
ನವದೆಹಲಿ: ನಾಳೆಯಿಂದ ದೇಶದಲ್ಲಿ ಜಿಎಸ್‌ಟಿ (GST) ಉಳಿತಾಯ ಉತ್ಸವ ಆರಂಭವಾಗುತ್ತಿದೆ, ಹಬ್ಬದ ಋತುವಿನಲ್ಲಿ ಬಾಯಿ ಸಿಹಿಯಾಗಲಿದೆ. ಇದರೊಂದಿಗೆ ದೇಶದ ಜನರು ಸ್ವದೇಶಿ ವಸ್ತುಗಳನ್ನು ಖರೀದಿ ಆತ್ಮನಿರ್ಭರ ಭಾರತವನ್ನು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ಸೋಮವಾರದಿಂದಿಂದ ವಸ್ತುಗಳ ಜಿಎಸ್‌ಟಿ ದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಸ್ವದೇಶಿ ಚಳುವಳಿಯಿಂದ ಸ್ವಾತಂತ್ರ್ಯ ಸಿಕ್ಕಿದೆ. ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಹೆಮ್ಮೆಯಿಂದ ಖರೀದಿಸಬೇಕು. ಪ್ರತಿ ಮನೆಯನ್ನೂ ಸ್ವದೇಶಿ ಪ್ರತೀಕ ಮಾಡಬೇಕು. ಪ್ರತಿ ಅಂಗಡಿಯನ್ನು ಸ್ವದೇಶಿ ವಸ್ತುಗಳಿಂದ ಅಲಂಕರಿಸಬೇಕು ಎಂದರು
ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು. ಹೂಡಿಕೆ ವಾತಾವರಣ ಸೃಷ್ಟಿಸಬೇಕು. ಇದರಿಂದ ಪ್ರತಿಯೊಂದು ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಮೋದಿ ಭಾಷಣದಲ್ಲಿ ಹೇಳಿದ್ದೇನು?
ನವರಾತ್ರಿ (Navarathri) ಮೊದಲ ದಿನದಂದು ಭಾರತ ಮಹತ್ವದ ಹೆಜ್ಜೆ ಇಡುತ್ತಿದೆ. ಆತ್ಮನಿರ್ಭರ ಭಾರತದ ದೊಡ್ಡ ಹೆಜ್ಜೆ ನಾಳೆಯಿಂದ ಆರಂಭವಾಗಲಿದೆ. ನವರಾತ್ರಿ ಮೊದಲ ದಿನ ಸುರ್ಯೋದಯದ ಜೊತೆಗೆ ಹೊಸ ತಲೆಮಾರಿನ ಜಿಎಸ್‌ಟಿ ಜಾರಿಯಾಗುತ್ತಿದೆ.
ನಾಳೆಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ ಆರಂಭವಾಗುತ್ತಿದೆ, ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಇದರಿಂದಾಗಿ ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿಸಬಹುದು. ಬಡವರು, ಮಧ್ಯಮ ವರ್ಗ, ಮಹಿಳೆಯರು, ರೈತರು, ಉದ್ಯಮಿಗಳಿಗೆ ಈ ನಿರ್ಧಾರದಿಂದ ಲಾಭವಾಗಲಿದೆ.
ಹಬ್ಬಗಳ ಈ ಋತುವಿನಲ್ಲಿ ಎಲ್ಲರ ಬಾಯಿ ಸಿಹಿಯಾಗಲಿದೆ. ಉಳಿತಾಯ ಉತ್ಸವಕ್ಕೆ ಶುಭಾಶಯ ಕೋರುತ್ತೇನೆ. ಇದು ಭಾರತದ ಅಭಿವೃದ್ಧಿಗೆಯನ್ನು ವೇಗ ನೀಡಲಿದೆ. ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹ ನೀಡಲಿದೆ. ಪ್ರತಿ ರಾಜ್ಯದ ಅಭಿವೃದ್ಧಿಗೆ ವೇಗ ನೀಡಲಿದೆ.
ಹಳೆಯ ಇತಿಹಾಸ ಬದಲಿಸುವ, ಹೊಸ ಇತಿಹಾಸ ಸೃಷ್ಟಿಯಾಗಲಿದೆ. ನಮ್ಮ ಜನರು ದಶಕಗಳಿಂದ ಹಲವು ತೆರಿಗೆಗಳಲ್ಲಿ ಮುಳುಗಿ ಹೋಗಿದ್ದರು. ಒಂದು ನಗರದಿಂದ ಮತ್ತೊಂದು ನಗರಕ್ಕೆ ವಸ್ತುಗಳ ಸಾಗಿಸಲು ಹಲವು ಫಾರಂ ತುಂಬಿಸಬೇಕಿತ್ತು. ಹಲವು ಕಡೆ ಹಲವು ತೆರಿಗೆ ಪದ್ದತಿಗಳಿದ್ದವು. ಇದನ್ನೂ ಓದಿ: ಡಬಲ್ ಸಂಭ್ರಮ – ಅಗತ್ಯ ವಸ್ತುಗಳ ಜಿಎಸ್‌ಟಿ ಇಳಿಕೆ| ಹಿಂದೆ ಎಷ್ಟು ದರ? ಈಗ ಎಷ್ಟು ಇಳಿಕೆ?
ನಾನು ಪ್ರಧಾನಿಯಾದ ಆರಂಭದಲ್ಲಿ ಒಂದು ಕಂಪನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ವಸ್ತುಗಳನ್ನು ಕಳುಹಿಸಲು ಕಷ್ಟಪಡುತ್ತಿತ್ತು. ಮೊದಲು ಬೆಂಗಳೂರಿನಿಂದ ಯುರೋಪ್ ಕಳುಹಿಸಿ ಬಳಿಕ ಹೈದರಾಬಾದ್‌ಗೆ ಬರುತ್ತಿತ್ತು. ವ್ಯಾಟ್, ಅಕ್ಟ್ರಾಯ್, ಅಬಕಾರಿ ಸುಂಕದಂತಹ ತೆರಿಗೆಗಳಿಂದ ಈ ಸಮಸ್ಯೆಯಾಗಿತ್ತು. ಈ ತೆರಿಗೆಯನ್ನು ಜನರು ಭರಿಸಬೇಕಿತ್ತು.
ಜನರ ಮತ್ತು ದೇಶದ ಹಿತಕ್ಕಾಗಿ ಎಲ್ಲಾ ರಾಜ್ಯಗಳು, ಸರ್ಕಾರಗಳ ಜೊತೆಗೆ ಚರ್ಚಿಸಿ ಜಿಎಸ್‌ಟಿಯನ್ನು ಜಾರಿ ಮಾಡಲಾಯಿತು. ಈಗ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಜಾರಿ ಮಾಡಿದೆ. ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ. ಸಮಯ ಬದಲಾದಂತೆ ಪರಿಷ್ಕರಣೆ ಅಗತ್ಯ. ಈಗ 5% ಮತ್ತು 18% ಎರಡೇ ಸ್ಲ್ಯಾಬ್ ಗಳನ್ನು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಸುಮಾರು 99% ವಸ್ತುಗಳು 5% ತೆರಿಗೆಯ ಅಡಿ ಬಂದಿವೆ.
1 ವರ್ಷದಲ್ಲಿ 25 ಕೋಟಿ ಜನರ ಬಡತನವನ್ನು ನಿರ್ಮೂಲನೆ ಮಾಡಿದ್ದು ಅವರು ಮಧ್ಯಮ ವರ್ಗಕ್ಕೆ ಬಂದಿದ್ದಾರೆ. ಈ ಮಧ್ಯಮ ವರ್ಗಕ್ಕೆ ಅವರದ್ದೇ ಆದ ಕನಸುಗಳಿದೆ. ಅದಕ್ಕಾಗಿ 12 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಲ್ಲಿ ದೊಡ್ಡ ಬದಲಾವಣೆ ಯಾಗಲಿದೆ. ಬಡವರು, ಮಧ್ಯಮ ವರ್ಗಕ್ಕೆ ಡಬಲ್ ಆಫರ್ ಸಿಕ್ಕಾಂತಾಗಿದೆ.
ಮನೆ ಕಟ್ಟಲು, ಟಿವಿ ಫ್ರಿಡ್ಜ್, ಕಾರು ಬೈಕ್ ಖರೀದಿಗೆ ಕಡಿಮೆ ಖರ್ಚು ಆಗಲಿದೆ. ಪ್ರವಾಸದ ಖರ್ಚು ಕಡಿಮೆಯಾಗಲಿದೆ. ಅಂಗಡಿಯವರಿಗೆ ಈ ಬಗ್ಗೆ ಸಾಕಷ್ಟು ಖುಷಿ ಇದ್ದು ಅವರು ಜಿಎಸ್‌ಟಿ ಲಾಭವನ್ನು ಜನರಿಗೆ ತಲುಪಿಸುತ್ತಿದ್ದಾರೆ
ನಾಗರಿಕ ದೇವೋ ಭವ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ. ಈ ನಿರ್ಧಾರದಿಂದ ಜನರಿಗೆ 2.5 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ವಿಕಸಿತ್ ಭಾರತ ಕನಸು ತಲುಪಲು ಆತ್ಮ ಭಾರತ್ ಹಾದಿಯಲ್ಲಿ ನಡೆಯಬೇಕಿದೆ.