ವರಮಹಾಲಕ್ಷ್ಮಿ ಹಬ್ಬಕ್ಕೆ ʻಗೃಹಲಕ್ಷ್ಮಿʼಯರಿಗೆ ಕೊಂಚ ನಿರಾಸೆ – ಎರಡ್ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ದುಡ್ಡು!

By
1 Min Read

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ, ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಅರ್ಹ ಫಲಾನುಭವಿಗಳ ಸರ್ಕಾರ (Karnataka Govt.) ಖಾತೆಗೆ ಜಮೆ ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಜೂನ್, ಜುಲೈ ತಿಂಗಳ ಗಣ ಬಂದಿರಲಿಲ್ಲ. ಇದೀಗಾ ಜೂನ್ ತಿಂಗಳ ಹಣ ಎರಡ್ಮೂರು ದಿನದಲ್ಲಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇನ್ನೂ ಜುಲೈ, ಆಗಸ್ಟ್ ತಿಂಗಳ ಹಣ ಮುಂದಿನ ತಿಂಗಳು ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival) ಮುನ್ನವೇ 2 ತಿಂಗಳ ಹಣ ಒಟ್ಟಿಗೇ ಬರುತ್ತೆ ಅಂದುಕೊಂಡಿದ್ದವ್ರಿಗೆ ಕೊಂಚ ನಿರಾಸೆಯಾಗಿದೆ. ಇದನ್ನೂ ಓದಿ: 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

ಜೂನ್ ತಿಂಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, 1.25 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಪ್ರತಿ ತಿಂಗಳಿಗೆ ಅಂದಾಜು 2,500 ಕೋಟಿ ರೂ. ಯೋಜನೆ ಮೂಲಕ ಫಲಾನುಭವಿಗಳಿಗೆ ತಲುಪುತಿತ್ತು. ಇದುವರೆಗೆ 10 ಕಂತುಗಳ ಹಣ ಬಿಡುಗಡೆಯಾಗಿದ್ದು, ಜೂನ್‌, ಜುಲೈ ತಿಂಗಳ ಹಣ ಬಾಕಿಯಿದೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎರಡು ತಿಂಗಳು ಸ್ಥಗಿತಗೊಂಡಿದ್ದ ಹಣವನ್ನ ಫಲಾನುಭವಿಗಳಿಗೆ ನೀಡಲು ಸರ್ಕಾರ ಮುಂದಾಗಿದೆ.

ಕೆಲವರಿಗೆ 10 ತಿಂಗಳಿನಿಂದ ಹಣ ಬಂದಿಲ್ಲ. ಹಣ ಬಾರದೇ ಇರೋದಕ್ಕೆ ಏನ್ ಕಾರಣ ಅನ್ನೋದನ್ನ ಅಧಿಕಾರಿಗಳು ಇನ್ಮುಂದೆ ಪರಿಶೀಲಿಸಿ, ಅರ್ಹ ಯಜಮಾನಿಯರಿಗೆ ಹಣ ತಲುಪಿಸಲಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

Share This Article