ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಗುಡ್‌ನ್ಯೂಸ್‌; ಹೊಸವರ್ಷಕ್ಕೂ ಮುನ್ನವೇ ರಾಜ್ಯದ ʻಗೃಹಲಕ್ಷ್ಮಿʼಯರ ಖಾತೆಗೆ ಕಾಸು

1 Min Read

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿದ್ದ ʻಗೃಹಲಕ್ಷ್ಮಿʼ (Gruhalakshmi Scheme Money) ಜಟಾಪಟಿಗೆ ತಾತ್ಕಾಲಿಕ ತೆರೆ ಬಿದ್ದಂತೆ ಕಾಣ್ತಿದೆ. ʻಪಬ್ಲಿಕ್‌ ಟಿವಿʼ ಸತತ ವರದಿಯ ಬಳಿಕ ಎಚ್ಚೆತ್ತ ಸರ್ಕಾರ ಕೊನೆಗೂ ಒಂದು ಕಂತಿನ ಹಣ ಬಿಡುಗಡೆ ಮಾಡಿದೆ. ಹೊಸವರ್ಷಕ್ಕೂ (New Year 2025) ಮುನ್ನವೇ ಈ ಹಣ ಮನೆ ಯಜಮಾನಿಯರ ಕೈ ಸೇರಲಿದೆ.

ಪ್ರತಿ ತಿಂಗಳು ಮನೆಯ ಯಜಮಾನಿಯರ ಆಕೌಂಟ್‌ಗೆ ಠಣ್ ಅಂತಾ ಎರಡು ಸಾವಿರ ಬೀಳ್ತಾ ಇರುತ್ತೆ. ಹಿಂಗೆ ಕಲರ್ ಕಲರ್ ಮಾತಿನಿಂದ ಅಂಗೈಯಲ್ಲಿ ಅರಮನೆ ಕಟ್ಟಿತ್ತು ಕಾಂಗ್ರೆಸ್ ಸರ್ಕಾರ. ಆದ್ರೆ 2-3 ತಿಂಗಳಿಗೊಮ್ಮೆ ಮಾತ್ರ ಗೃಹಲಕ್ಷ್ಮಿ ದುಡ್ಡು ಆಕೌಂಟ್ ಬೀಳ್ತಾ ಇತ್ತು. ಫೆಬ್ರವರಿ ಮಾರ್ಚ್ ದುಡ್ಡು ಎಲ್ಲಿ ಹೋಯ್ತು ಗೊತ್ತಿಲ್ಲ. ಆದ್ರೆ ಪಬ್ಲಿಕ್ ಟಿವಿಯ (Public TV) ಸತತ ವರದಿ, ಸದನದಲ್ಲಿ ಜಟಾಪಟಿಯ ಬಳಿಕ ಕೊನೆಗೂ ಸೆಪ್ಟೆಂಬರ್‌ ಕಂತಿನ ಹಣವನ್ನ ಬಿಡುಗೆ ಮಾಡಲಾಗಿದೆ. ಇದನ್ನೂ ಓದಿ: ಕಾರವಾರ | ಕರಾವಳಿ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ್‌ – 2 ದಿನ ತೀವ್ರ ಚಳಿ ಎಚ್ಚರಿಕೆ

ಡಿಸೆಂಬರ್‌ 16ರಂದೇ ಆರ್ಥಿಕ ಇಲಾಖೆಯಿಂದ ಸೆಪ್ಟೆಂಬರ್‌ ಕಂತಿನ ಹಣ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೂ ಮುನ್ನವೇ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಶಿರಾ | 3 ಕೋಟಿಯ ಜಾಗಕ್ಕಾಗಿ ಹರಿಯಿತು ನೆತ್ತರು – ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವಕನ ಹತ್ಯೆ

ಇನ್ನೂ ಅಕ್ಟೋಬರ್, ನವೆಂಬರ್, ಡಿಸೆಂಬರ್ ದುಡ್ಡು ಅದ್ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ. ಆದ್ರೇ ಇನ್ನೊಂದು ವಾರದಲ್ಲಿ ಸೆಪ್ಟೆಂಬರ್ ಕಂತಿನ ಹಣ ಡಿಬಿಟಿ ಮೂಲಕ ಪ್ರತಿ ಮನೆ ಯಜಮಾನಿ ಖಾತೆಗೆ ಜಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಗೆ ಪವಿತ್ರಗೌಡ ಶತಪ್ರಯತ್ನ – ನಯವಾಗೇ ನಿರಾಕರಿಸಿದ ದರ್ಶನ್!

Share This Article