ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಾಳೆಯಿಂದ ಆರಂಭ: ಲಕ್ಷ್ಮಿ ಹೆಬ್ಬಾಳ್ಕರ್

Public TV
2 Min Read

– ಸಿಎಂ ಅವರಿಂದ ಶಕ್ತಿ ಭವನದಲ್ಲಿ ನಾಳೆ ಯೋಜನೆ ವೆಬ್‌ಸೈಟ್ ಲಾಂಚ್
– ಅರ್ಜಿ ಸಲ್ಲಿಕೆ ಎಲ್ಲಿ, ಹೇಗೆ, ಸಲ್ಲಿಸಬೇಕಾದ ದಾಖಲೆಗಳೇನು?

ಬೆಂಗಳೂರು: ಕಾಂಗ್ರೆಸ್ (Congress Guarantee) ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ನಾಳೆ ಚಾಲನೆ ನೀಡಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಾಳೆಯಿಂದ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.

ಯೋಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ 1:30 ಕ್ಕೆ ಶಕ್ತಿ ಭವನದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಯೋಜನೆಯ ವೆಬ್‌ಸೈಟ್ ಲಾಂಚ್ ಮಾಡಲಾಗುವುದು. ಸಾಂಕೇತಿಕವಾಗಿ ನಾಲ್ಕೈದು ಜನರಿಗೆ ನಾಳೆ ನೋಂದಣಿ ಮಾಡಲಿದ್ದೇವೆ. ಆಗಸ್ಟ್ 18 ಕ್ಕೆ ಬೆಳಗಾವಿಯಿಂದ ಚಾಲನೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗಂಡ ತೆರಿಗೆ ಪಾವತಿ ಮಾಡಿದ್ರೆ ಮಾತ್ರ ಗೃಹಲಕ್ಷ್ಮಿ ಭಾಗ್ಯ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಅರ್ಜಿ ಸಲ್ಲಿಸಲು ಮನೆ ಯಜಮಾನಿಯ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಅರ್ಜಿದಾರರ ಬ್ಯಾಂಕ್ ಖಾತೆ ವಿವರ ಸಲ್ಲಿಸೋದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ಸೇವಾಸಿಂಧು ಪೋರ್ಟಲ್‌ನ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ ಸಲ್ಲಿಸಬೇಕು. 2,000 ರೂ. ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತೆ. ಅರ್ಜಿಗಳ ಸಲ್ಲಿಕೆಯೂ ಉಚಿತವಾಗಿರುತ್ತದೆ. ಅದಕ್ಕೆ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಗೃಹಲಕ್ಷ್ಮಿ ಸಹಾಯವಾಣಿ ಆರಂಭಿಸಲಾಗುವುದು. ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ 1902 ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಟ್ಯಾಕ್ಸ್ ಕಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ: ಡಿಕೆಶಿ

ನಾಡಕಚೇರಿಯಲ್ಲಿ ಸಲ್ಲಿಕೆಗೆ ಅವಕಾಶ ಇಲ್ಲ. ಮನೆ ಮನೆಗೂ ಕೆಲವರಿಗೆ ಅರ್ಜಿ ಸಲ್ಲಿಕೆಗೆ ತೆಗೆದುಕೊಳ್ಳುತ್ತೇವೆ. 1.28 ಕೋಟಿ ಕುಟುಂಬಕ್ಕೆ (78%) ಈ ಯೋಜನೆಯ ಲಾಭ ಸಿಗಲಿದೆ. ಬೆಳಗಾವಿಯಿಂದ ಯೋಜನೆಗೆ ಚಾಲನೆ ನೀಡಲಾಗುವುದು. ಪ್ರತಿ ತಿಂಗಳು ಯಾವ ದಿನಾಂಕದಲ್ಲಿ ಹಣ ಹಾಕೋದು ಅನ್ನೋದು ನಿರ್ಧಾರ ಮಾಡುತ್ತೇವೆ. ತೆರಿಗೆ ಕಟ್ಟೋರ ಬಗ್ಗೆ ನಾವು ಆಧಾರ್, ಬ್ಯಾಂಕ್ ಆಕೌಂಟ್ ಮೂಲಕ ಪರಿಶೀಲನೆ ಮಾಡ್ತೀವಿ. ಹೀಗಾಗಿ ಮನೆ ಯಜಮಾನಿಯ ಪತಿ ತೆರಿಗೆ ಪಾವತಿ ಮಾಡಿದರೆ ಗೊತ್ತಾಗುತ್ತೆ ಎಂದು ಹೇಳಿದರು.

ಹೊಸ ಎಪಿಎಲ್, ಬಿಪಿಎಲ್ ಕಾರ್ಡ್ ಸಲ್ಲಿಕೆಗೆ ಪೋರ್ಟಲ್ ಲಾಕ್ ವಿಚಾರವಾಗಿ ಮಾತನಾಡಿ, ಶೀಘ್ರದಲ್ಲಿಯೇ ಇದರ ಬಗ್ಗೆ ನಾನು ಕೂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಿಗೆ ಮನವಿ ಮಾಡುತ್ತೇನೆ. ಒಂದು ವೇಳೆ ಪೋರ್ಟಲ್ ವಿಳಂಬವಾದರೂ ಮುಂದಿನ ದಿನದಲ್ಲಿ ಅನುವು ಮಾಡಿಕೊಡ್ತೀವಿ ಎಂದರು.

Share This Article