ದೇವದಾಸಿಯರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುತ್ತೆ : ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read

ಬೆಳಗಾವಿ: ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡಾ ಗೃಹ ಲಕ್ಷ್ಮೀ (Gruha Lakshmi) ಯೋಜನೆಯ ನೆರವು ದೊರೆಯುತ್ತಿದ್ದು, ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

ವಿಧಾನ ಪರಿಷತ್ (Vidhan Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆ ಕೇಳಿದ್ರು.ಕೊಪ್ಪಳದಲ್ಲಿ ಸರಿಯಾಗಿ ದೇವದಾಸಿಯರಿಗೆ (Devadasi) ಮಾಶಾಸನ ಸಿಗುತ್ತಿಲ್ಲ. ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ. ದೇವದಾಸಿಯರ ಮಾಶಾಸನ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ನೀಡಬೇಕು ಅಂತ ಒತ್ತಾಯ ಮಾಡಿದ್ರು.

 

ಇದಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿ, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ಡಿಬಿಟಿ ಮೂಲಕ ಹಾಕಲಾಗ್ತಿದೆ.ಎಲ್ಲೂ ಕೂಡಾ ಮಾಶಾಸನ ಸೋರಿಕೆ ಆಗ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ ಅನ್ನೋ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದರು.

ದೇವದಾಸಿಯರಿಗೆ 2 ಸಾವಿರ ರೂ. ಮಾಶಾಸನ ಕೊಡಲಾಗುತ್ತಿದೆ‌. ಪ್ರತಿ ವರ್ಷ 250 ದೇವದಾಸಿಯರಿಗೆ ಒಂದು ಸಾರಿಗೆ ಪ್ರೊತ್ಸಾಹ ಧನವಾಗಿ 30 ಸಾವಿರ ನೀಡಲಾಗುತ್ತದೆ‌. ಈ ಹಣ ವಾಪಸ್ ಕೊಡುವ ಹಾಕಿಲ್ಲ.ದೇವದಾಸಿಯರಿಗೆ ಆರೋಗ್ಯ ತಪಾಸಣೆ ಮಾಡೋ ಕೆಲಸ ಆಗ್ತಿದೆ.ಮನೆಗಳು ಕೊಡೋ ಬಗ್ಗೆ ನಾವು ಪಟ್ಟಿ ಮಾಡಿ ವಸತಿ ಇಲಾಖೆಗೆ ಕಳಿಸುತ್ತೇವೆ. ಅವರು ಅಂತಿಮ ನಿರ್ಧಾರ ಮಾಡಬೇಕು.ಯಾರು ಅರ್ಜಿ ಹಾಕಿರುತ್ತಾರೋ ಅವರಿಗೆ ಆದ್ಯತೆ ಮೇರೆಗೆ ಮನೆ ಹಂಚಿಕೆ ಮಾಡುತ್ತದೆ.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಕೊಡಲಾಗ್ತಿದೆ. ಯಾರಿಗಾದರೂ ಸಿಗದೇ ಇದ್ದರೆ ಮಾಹಿತಿ ಕೊಟ್ಟರೆ ಅವರಿಗೆ ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎಂದು ತಿಳಿಸಿದರು.

 

Share This Article