ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ

Public TV
2 Min Read

ಪಾಟ್ನಾ: ಮಾರುಕಟ್ಟೆಯಲ್ಲಿ ದಿನಸಿ ಸಾಮಾಗ್ರಿ, ಹಣ್ಣು, ತರಕಾರಿಯನ್ನು ಮಾರಾಟ ಮಾಡುವುದು ಸಾಮಾನ್ಯ. ಆದರೆ ಈಗ ನಾವು ಹೇಳುತ್ತಿರುವ ವಿಶೇಷ ಮಾರುಕಟ್ಟೆಯಲ್ಲಿ ಹುಡುಗಿಯರು ತಮ್ಮ ವರನನ್ನು ಖರೀದಿಸಬಹುದು. ಏನು ವರನನ್ನು ಖರೀದಿಸಲು ಮಾರುಕಟ್ಟೆ ಇದ್ಯಾ ಎಂದು ಎಲ್ಲರೂ ಅಚ್ಚರಿ ಪಡಬಹುದು. ಆದರೆ ಇದು ನಿಜ. ಬಿಹಾರದಲ್ಲಿ ಈ ರೀತಿಯ ಮಾರುಕಟ್ಟೆ ಇದೆ.

ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯು ವಧುಗಳಿಗೆ ವರನನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತೆ. ಈ ಸಂಪ್ರದಾಯವು ಸುಮಾರು 700 ವರ್ಷಗಳಿಂದಲೂ ಇದ್ದೂ ಈಗಲೂ ಆಚರಣೆಯಲ್ಲಿದೆ. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ

 
ಸ್ಥಳೀಯವಾಗಿ ‘ಸೌರತ್ ಸಭಾ’ ಎಂದು ಕರೆಯಲ್ಪಡುವ ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯಾದ್ಯಂತ ತಮ್ಮ ಹೆಣ್ಣುಮಕ್ಕಳೊಂದಿಗೆ ವರನನ್ನು ಆಯ್ಕೆ ಮಾಡಲು ಈ ಮಾರುಕಟ್ಟೆಗೆ ಬರುತ್ತಾರೆ.

ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಧೋತಿ ಮತ್ತು ಕುರ್ತಾ ಅಥವಾ ಜೀನ್ಸ್ ಮತ್ತು ಶರ್ಟ್‍ಗಳನ್ನು ಧರಿಸಿ ಮಾರುಕಟ್ಟೆಯಲ್ಲಿ ಸಾವಿರಾರು ವರರು ತಮ್ಮ ಪೋಷಕರೊಂದಿಗೆ ಹಾಜರಿರುತ್ತಾರೆ. ಪ್ರತಿಯೊಬ್ಬರು ಅವರ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ವರನ ಬೆಲೆ ನಿಗದಿಪಡಿಸಲಾಗುತ್ತದೆ.

ವರನನ್ನು ಆಯ್ಕೆ ಮಾಡುವ ಮೊದಲು, ವಧುವಿನ ಕುಟುಂಬ ವರನ ಅರ್ಹತೆ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಅವರು ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಇತ್ಯಾದಿ ಪುರಾವೆಗಳನ್ನು ಸಹ ಕೇಳುತ್ತಾರೆ. ವಧು, ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನ ಆಯ್ಕೆಯಾದ ತಕ್ಷಣ ಹುಡುಗಿಯ ಮನೆಯವರು ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ. ಇದನ್ನೂ ಓದಿ:  ನಿರಂತರ ಜಿಟಿ ಜಿಟಿ ಮಳೆ – ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು 

ಹಿನ್ನೆಲೆ
ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಆಚರಣೆಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವಿಭಿನ್ನ ‘ಗೋತ್ರಗಳ’ ಜನರ ನಡುವೆ ವಿವಾಹಗಳನ್ನು ಸುಲಭಗೊಳಿಸಲು ರಾಜಾ ಹರಿ ಸಿಂಗ್ ಇದನ್ನು ಪ್ರಾರಂಭಿಸಿದರು. ಮದುವೆಗಳನ್ನು ವರದಕ್ಷಿಣೆ ರಹಿತವಾಗಿ ಮಾಡುವುದು ಇನ್ನೊಂದು ಉದ್ದೇಶವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮಾತ್ರ ಕಳೆದ 700 ವರ್ಷಗಳಿಂದಲೂ ಈ ಪದ್ದತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *