ವಧುವಿನ ಕೈ ಹಿಡಿದ ವರನ ಸಹೋದರಿ!

Public TV
1 Min Read

– ಗುಜರಾತ್‍ನಲ್ಲಿ ನಡೆಯುತ್ತೇ ವಿಚಿತ್ರ ವಿವಾಹ

ಗಾಂಧಿನಗರ: ಭಾರತದ ಹಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರಾದಾಯಿಕ ಮದುವೆ ಶೈಲಿಗಳು ಜಾರಿಯಲ್ಲಿದ್ದು, ಗುಜರಾತ್‍ನ ಚೋಟಾ ಉದಯ್‍ಪುರ ಪ್ರದೇಶದ ಬುಡಕಟ್ಟಿನ ಸಮುದಾಯದಲ್ಲಿ ವರನ ಸಹೋದರಿ ವಧುವನ್ನು ಮದುವೆಯಗುವ ಪದ್ಧತಿ ಜಾರಿಯಲ್ಲಿದೆ.

ತನ್ನ ಮದುವೆ ಸಮಾರಂಭದಲ್ಲಿಯೇ ವರನಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ. ಆತನ ಸಹೋದರಿ ಅಥವಾ ಆತನ ಕುಟುಂಬದಲ್ಲಿ ಮದುವೆ ಆಗದೆ ಇರುವ ಯುವತಿ ವರನ ಪರವಾಗಿ ಮದುವೆ ಸಮಾರಂಭದಲ್ಲಿ ಭಾಗವಹಿಸುತ್ತಾಳೆ. ಮದುವೆಯ ಮೆರವಣಿಗೆಯಿಂದ ಹಿಡಿದು, ವಧುವಿಗೆ ತಾಳಿ ಕಟ್ಟುವ ಶಾಸ್ತ್ರವನ್ನು ಆಕೆಯೇ ನಿರ್ವಹಿಸುತ್ತಾಳೆ.

ಮದುವೆ ಸಂದರ್ಭದಲ್ಲಿ ವರ ತನ್ನ ತಾಯಿಯೊಂದಿಗೆ ಮನೆಯಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಮದುವೆ ಬಳಿಕ ವರನ ಸಹೋದರಿ ವಧುವನ್ನು ಮನೆಗೆ ಕರೆತರುತ್ತಾಳೆ. ಈ ಪದ್ಧತಿಯನ್ನ ಹಲವು ವರ್ಷಗಳಿಂದ ತಾವು ನಡೆಸಿಕೊಂಡು ಬರುತ್ತಿದ್ದು, ಇದಕ್ಕೆ ವಿರುದ್ಧವಾಗಿ ನಡೆದರೆ ತಮಗೆ ತೊಂದರೆ ಉಂಟಾಗಲಿದೆ ಎಂದು ಹಳ್ಳಿಯ ಮುಖ್ಯಸ್ಥ ಕನ್ವಿಭಾಯ್ ರತ್ವಾ ಹೇಳಿದ್ದಾರೆ.

ಮದುವೆ ದಿನದಂದು ವರ ‘ಶೆರ್ವಾನಿ’ ಹಾಗೂ ತಲೆಗೆ ‘ಸಫಾ’ ಧರಿಸಿ ಸಿದ್ಧವಾದರು ಕೂಡ ಆತ ಮನೆಯಲ್ಲಿಯೇ ಉಳಿಯಬೇಕಾಗುತ್ತದೆ. ಇದು ನಮ್ಮ ಬುಡಕಟ್ಟು ಜನಾಂಗದ ಪದ್ಧತಿಯಾಗಿದ್ದು, ಇದನ್ನು ಮೀರಿ ಕೆಲವರು ವಿವಾಹಗಿದ್ದಾರೆ. ಆದರೆ ಅಂತಹ ವಿವಾಹಗಳು ಮುರಿದು ಬಿದ್ದಿದ್ದು, ಕುಟುಂಬಕ್ಕೆ ನಷ್ಟ ಉಂಟಾಗಿದೆ. ಆದ್ದರಿಂದಲೇ ಈಗಲೂ ನಮ್ಮ ಪದ್ಧತಿಯನ್ನು ಮುಂದುವರಿಸುತ್ತಿದ್ದೇವೆ ಎಂದು ರತ್ವಾ ವಿವರಿಸಿದ್ದಾರೆ. ಈ ಪ್ರದೇಶದ ಸುರ್ಕೆಡಾ, ಸನಾಡಾ, ಅಂಬಾಲಾ ಎಂಬ ಮೂರು ಹಳ್ಳಿಗಳಲ್ಲಿ ಮಾತ್ರ ಈ ಪದ್ಧತಿ ಜಾರಿಯಲ್ಲಿದೆ.

 

Share This Article
Leave a Comment

Leave a Reply

Your email address will not be published. Required fields are marked *