ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

Public TV
1 Min Read

ಭೋಪಾಲ್: ವಿವಾಹ (Wedding) ಸಮಾರಂಭದಲ್ಲಿ ವಧು (Bride) ಮತ್ತು ವರನ (Groom) ನಡುವೆ ವಿವಾದ ಏರ್ಪಟ್ಟು ಇಬ್ಬರೂ ವಿಷ (Poison) ಕುಡಿದಿದ್ದು, ವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ನಗರದಲ್ಲಿ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್‌ಐ (SI) ರಂಜಾನ್ ಖಾನ್, ಕನಾಡಿ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ಸಮಾರಂಭದ ವೇಳೆ ವಧು-ವರನ ನಡುವೆ ಜಗಳ ನಡೆದಿದ್ದು, ವರ ವಿಷ ಕುಡಿದು ಈ ವಿಷಯವನ್ನು ವಧುವಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ವಧು ಸಹ ವಿಷ ಕುಡಿದಿದ್ದಾಳೆ ಎಂದರು. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

ವಿಷ ಕುಡಿದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ವಧು ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್

ವರನ ಕುಟುಂಬಸ್ಥರು ಹೇಳಿದ ಪ್ರಕಾರ, ವಧು ವರನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ತನ್ನ ಜೀವನ ವೃತ್ತಿಯಿಂದಾಗಿ ವರ ಎರಡು ವರ್ಷಗಳ ಕಾಲಾವಕಾಶವನ್ನು ಕೇಳಿದ್ದ. ಆದರೆ ವಧು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದಿದ್ದಾರೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ

ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

Share This Article