ಗ್ರೀನ್‌ಲ್ಯಾಂಡ್ ಅಮೆರಿಕದ ಪ್ರಾಂತ್ಯ, ಹೊಸ ನಕ್ಷೆ ಬಿಡುಗಡೆ – ಡೆನ್ಮಾರ್ಕ್‌ನಿಂದ ಸೇನೆ ರವಾನೆ

1 Min Read

ವಾಷಿಂಗ್ಟನ್‌/ ಡಾವೋಸ್‌/ ಮಾಸ್ಕೋ: ಗ್ರೀನ್‌ಲ್ಯಾಂಡ್ (Greenland) ವಶಕ್ಕೆ ಪಡೆಯಲು ಟ್ರಂಪ್ (Donald Trump) ಕೌಂಟ್‌ಡೌನ್ ಆರಂಭಿಸಿದ್ದಾರೆ. ಗ್ರೀನ್‌ಲ್ಯಾಂಡ್ ಸುತ್ತ ಯುದ್ಧವಿಮಾನಗಳನ್ನು ಸಜ್ಜುಗೊಳಿಸಿದ್ದಾರೆ. ಅಲ್ಲದೆ, ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ವೆನೆಜುವೆಲಾವನ್ನು ಅಮೆರಿಕದ ಭಾಗವಾಗಿ ಚಿತ್ರಿಸುವ ಅಮೆರಿಕದ ಧ್ವಜದೊಂದಿಗೆ ಇತರ ಯುರೋಪಿಯನ್ ನಾಯಕರೊಂದಿಗೆ ತಮ್ಮ ಹಳೆಯ ಛಾಯಾಚಿತ್ರವನ್ನು ತೋರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಟ್ರಂಪ್‌ ಪಕ್ಕದಲ್ಲಿ ಅದರ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗ್ರೀನ್‌ಲ್ಯಾಂಡ್‌ನಲ್ಲಿ ಯುಎಸ್ ಧ್ವಜವನ್ನು ಹಾರಿಸುತ್ತಿರುವುದನ್ನು ಹಂಚಿಕೊಂಡಿದ್ದಾರೆ. ಅದರ ಮೇಲೆ “ಗ್ರೀನ್‌ಲ್ಯಾಂಡ್ ಯುಎಸ್ ಟೆರಿಟರಿ, ಸ್ಥಾಪನೆ 2026” ಎಂದು ಬರೆಯಲಾದ ಮೈಲಿಗಲ್ಲು ಇದೆ. ಅಮೆರಿಕದ ನಡೆ ಖಂಡಿಸಿ ಡೆನ್ಮಾರ್ಕ್ (Denmark) ಕೂಡ ಗ್ರೀನ್‌ಲ್ಯಾಂಡ್ ಪರ ಸೇನೆ ಜಮಾವಣೆಗೊಳಿಸಿದೆ.  ಇದನ್ನೂ ಓದಿ:  ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಪ್ಲ್ಯಾನ್‌ಗೆ ವಿರೋಧ – ಡೆನ್ಮಾರ್ಕ್, ಯುಕೆ, ಫ್ರಾನ್ಸ್ ಮೇಲೆ 10% ಸುಂಕ ವಿಧಿಸಿದ ಟ್ರಂಪ್‌

ಗ್ರೀನ್‌ಲ್ಯಾಂಡನ್ನು ವಶಕ್ಕೆ ಪಡೆಯುವ ಟ್ರಂಪ್ ನಿರ್ಧಾರದ ವಿರುದ್ಧ ಯುರೋಪ್‌ನ ಹಲವು ರಾಷ್ಟ್ರಗಳು ಸಿಡಿದೆದ್ದಿವೆ. ಅದರಲ್ಲೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಎಲ್ಲೆಂದರಲ್ಲಿ ನಿಮ್ಮ ಬಾವುಟ ಹಾರಾಡಲು ನಾವು ಬಿಡೋದಿಲ್ಲ ಅಂತ ಗುಡುಗಿದ್ದರು. ಅಲ್ಲದೇ ಟ್ರಂಪ್ ರಚಿಸಿರುವ ಬೋರ್ಡ್ ಆಫ್ ಪೀಸ್ ಮಂಡಳಿ ಸೇರಲು ನಿರಾಕರಿಸಿದ್ದರು.

ಮ್ಯಾಕ್ರನ್‌  ನಿರ್ಧಾರಕ್ಕೆ ರೊಚ್ಚಿಗೆದ್ದಿರುವ ಟ್ರಂಪ್ ಇದೀಗ ಫ್ರಾನ್ಸಿನ ವೈನ್ ಹಾಗೂ ಶಾಂಪೈನ್ ಉತ್ಪನ್ನಗಳ ಮೇಲೆ 200% ರಷ್ಟು ಆಮದು ಸುಂಕ ವಿಧಿಸಿದ್ದಾರೆ. ಗಾಜಾ ಯುದ್ಧ ಸೇರಿದಂತೆ ಜಾಗತಿಕ ಸಂಘರ್ಷಗಳಿಗೆ ಕೊನೆ ಹಾಡಲು ಟ್ರಂಪ್ `ಬೋರ್ಡ್ ಆಫ್ ಪೀಸ್’ ಎಂಬ ಮಂಡಳಿ ರಚನೆ ಮಾಡಿ, ಭಾರತ ಸೇರಿ 60 ದೇಶಗಳಿಗೆ ಸಮಿತಿಯಲ್ಲಿ ಭಾಗಿಯಾಗಲು ಆಮಂತ್ರಣ ನೀಡಿದ್ದಾರೆ.

ಈ ಮಧ್ಯೆ, ಗ್ರೀನ್‌ಲ್ಯಾಂಡನ್ನು ನಾವು ವಶ ಪಡಿಸಿಕೊಳ್ಳಲ್ಲ ಅಂದಿರುವ ರಷ್ಯಾ, ಯಾರು ಎಷ್ಟೇ ಒತ್ತಡ ಹೇರಿದರೂ ಇರಾನ್ ಜೊತೆಗಿನ ನಮ್ಮ ವ್ಯಾಪಾರ ವಹಿವಾಟು ಮುಂದುವರಿಯುತ್ತೆ ಅಂತ ಟ್ರಂಪ್‌ಗೆ ಟಕ್ಕರ್ ಕೊಟ್ಟಿದೆ.

Share This Article