ಹೊಸ ರೈಲು ಸಂಚಾರಕ್ಕೆ ಜೂನ್ 20ರಂದು ಹಸಿರು ನಿಶಾನೆ

Public TV
1 Min Read

ತುಮಕೂರು: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ತುಮಕೂರು – ತಿಪಟೂರು – ಅರಸೀಕೆರೆ ಹಾಗೂ ತುಮಕೂರು – ಯಶವಂತಪುರ – ಬಾಣಸವಾಡಿ ನಡುವೆ ಹೊಸದಾಗಿ ಪ್ಯಾಸೆಂಜರ್ ರೈಲು ಸಂಚಾರ ಜೂನ್ 20ರಿಂದ ಆರಂಭವಾಗಲಿದೆ.

ನವದೆಹಲಿಯ ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಕುಮರ್ ತ್ರಿಪಾಠಿ ಅವರನ್ನು ಸಂಸದ ಜಿಎಸ್ ಬಸವರಾಜು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ?

ಹೊಸದಾಗಿ ಎರಡು ರೈಲುಗಳ ಸಂಚಾರ ಆರಂಭಿಸುವ ಭರವಸೆಯನ್ನು ರೈಲ್ವೆ ಮಂಡಳಿ ಅಧಿಕಾರಿಗಳು ನೀಡಿದ್ದಾರೆ. ಜೂನ್ 20ರಂದು ನಗರದ ರೈಲು ನಿಲ್ದಾಣದಲ್ಲಿ ನೂತನ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಕ್ಯಾಶ್! – ಸುದ್ದಿ ಕೇಳುತ್ತಲೇ ಮುಗಿಬಿದ್ರು ಜನ

Live Tv

Share This Article
Leave a Comment

Leave a Reply

Your email address will not be published. Required fields are marked *