– ಪ್ರಿಯತಮೆ ಮೇಲೂ ಹಲ್ಲೆ ಮಾಡಿದ್ನಂತೆ ವಿಪಿನ್
ಲಕ್ನೋ: ಗ್ರೇಟರ್ ನೋಯ್ಡಾದಲ್ಲಿ (Greater Noida) ಇತ್ತೀಚೆಗೆ ಪತ್ನಿಗೆ ವರದಕ್ಷಿಣೆ ಕಿರುಕುಳ (Dowry Case) ನೀಡಿ ಬೆಂಕಿ ಹಚ್ಚಿ ಕೊಲೆಗೈದ ವಿಪಿನ್ ಈ ಹಿಂದೆ ಪ್ರಿಯತಮೆ ಜೊತೆಗಿದ್ದಾಗ ಸಿಕ್ಕಿಬಿದ್ದಿದ್ದ. ಈ ವೇಳೆ ಆತ ತನ್ನ ಸ್ನೇಕಿತನ ಜೊತೆ ಸೇರಿ ಪ್ರಿಯತಮೆ ಮೇಲೆ ಹಲ್ಲೆ ನಡೆಸಿದ್ದ ಎಂಬ ವಿಚಾರ ತಿಳಿದುಬಂದಿದೆ.
ಹಲ್ಲೆ ನಡೆಸಿದ್ದ ವಿಚಾರವಾಗಿ 2024ರ ಅಕ್ಟೋಬರ್‌ನಲ್ಲಿ ಮಹಿಳೆ ಗ್ರೇಟರ್ ನೋಯ್ಡಾದ ಜಾರ್ಚಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿತ್ತು. ಈ ಮೂಲಕ ವಿಪಿನ್‌ನ ಕ್ರೌರ್ಯದ ಮುಖ ಅನಾವರಣಗೊಂಡಿದೆ. ಇದನ್ನೂ ಓದಿ: ಪತ್ನಿಗೆ ಬೆಂಕಿ ಹಚ್ಚಿ ಕೊಂದವನ ಕಾಲಿಗೆ ಗುಂಡೇಟು – ನನಗ್ಯಾವ ಪಶ್ಚಾತ್ತಾಪ ಇಲ್ಲ ಎಂದ ಪಾಪಿ!
ಆ.23 ರಂದು ನಿಕ್ಕಿ (26) ಎಂಬ ಮಹಿಳೆಯನ್ನು ಆಕೆಯ ಪತಿ, ಅತ್ತೆ ಮಾವ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಮಹಿಳೆಯ ಪತಿ ಮತ್ತು ಆಕೆಯ ಅತ್ತೆ, ಮಹಿಳೆಯ ತಲೆ ಕೂದಲನ್ನು ಹಿಡಿದು ಥಳಿಸುತ್ತಿರುವ ವೀಡಿಯೊದಲ್ಲಿ ವೈರಲ್ ಆಗಿತ್ತು. ಅಲ್ಲದೇ ಬಳಿಕ ಬೆಂಕಿ ಹೊತ್ತಿ ಉರಿಯುವಾಗ ಆಕೆ ಮೆಟ್ಟಿಲಿನಿಂದ ಇಳಿದು, ನೆಲದ ಮೇಲೆ ಕುಳಿತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಆಕೆಯನ್ನು ನೆರೆಹೊರೆಯವರ ಸಹಾಯದಿಂದ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆಯೇ ನಿಕ್ಕಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ಬೆಂಕಿ ಹಚ್ಚಿ ಮಹಿಳೆ ಕೊಂದ ಪತಿ, ಅತ್ತೆ-ಮಾವ
ಮಹಿಳೆಯ ಹತ್ಯೆಯ ಭಯಾನಕ ದೃಶ್ಯ ಕಂಡ ಆಕೆಯ ಪುಟ್ಟ ಮಗ, ಮಾಧ್ಯಮಗಳ ಮುಂದೆ ತಂದೆ, ಅಜ್ಜ ಹಾಗೂ ಅಜ್ಜಿಯ ಕ್ರೌರ್ಯವನ್ನು ಬಿಚ್ಚಿಟ್ಟಿದ್ದ. ಮಾಧ್ಯಮಗಳ ಮುಂದೆ, ಅಪ್ಪ, ಅಜ್ಜ ಮತ್ತು ಅಜ್ಜಿ ಸೇರಿ ಅಮ್ಮನ ಕೆನ್ನೆಗೆ ಹೊಡೆದ್ರೂ, ಆಮೇಲೆ ಅಮ್ಮನ ಮೇಲೆ ಏನೋ ಹಾಕಿ ಬೆಂಕಿ ಹಚ್ಚಿದ್ರೂ ಎಂದು ಬಾಲಕ ಹೇಳಿದ್ದ. ಈ ಸಂಬಂಧ ನಿಕ್ಕಿಯ ಸಹೋದರಿ ನೀಡಿದ ದೂರಿನ ಮೇರೆಗೆ, ಕಸ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು.
ಬಂಧನದಲ್ಲಿದ್ದ ವಿಪಿನ್ ಸ್ಥಳಮಹಜರಿಗೆ ಕರೆದೊಯ್ಯುವಾಗ ಪರಾರಿಯಾಗಲು ಯತ್ನಿಸಿದ್ದ. ಅಲ್ಲದೇ ಪೊಲೀಸರಿಂದ ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಇನ್ನೂ ಆಸ್ಪತ್ರೆಯಲ್ಲಿದ್ದಾಗ, ನಿಕ್ಕಿಯೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ. ನನಗೆ ಯಾವ ಪಶ್ಚಾತ್ತಾಪವೂ ಇಲ್ಲ ಎಂದಿದ್ದ. ಇದನ್ನೂ ಓದಿ: ಅಮ್ಮನ ಕೆನ್ನೆಗೆ ಹೊಡೆದು ಬೆಂಕಿ ಹಚ್ಚಿದ್ರು – ವರದಕ್ಷಿಣೆ ಕೊಲೆಗೆ ಸಾಕ್ಷಿಯಾದ ಪುಟ್ಟ ಕಂದ