– ಬೆಂಗಳೂರು ವಿವಿಗೆ ಡಾ.ಮನಮೋಹನ್ ಸಿಂಗ್ ಹೆಸರು; ವಿಧೇಯಕ ಅಂಗೀಕಾರ
ಬೆಂಗಳೂರು: ವಿಭಜಿತ ಬಿಬಿಎಂಪಿಯ (BBMP) ಪಂಚ ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಲು ಅವಕಾಶ ಕೊಡುವ ಗ್ರೇಟರ್ ಬೆಂಗಳೂರು (Greater Bengaluru) ಆಡಳಿತ ತಿದ್ದುಪಡಿ ವಿಧೇಯಕಕ್ಕೆ (Governance Amnedment Bill 2025) ವಿಧಾನಸಭೆಯಲ್ಲಿ (Legislative Assembly) ವಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೂ ಅಂಗೀಕಾರ ಪಡೆದುಕೊಂಡಿತು.
ವಿಧೇಯಕ ಬಗ್ಗೆ ಸದನದಲ್ಲಿ ವಿವರ ನೀಡಿದ ಡಿಸಿಎಂ ಡಿಕೆಶಿ, ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಿ ಸಮನ್ವಯ ಸಮಿತಿಯಂತೆ ಐದೂ ಪಾಲಿಕೆಗಳು ಕೆಲಸ ಮಾಡಲು ತಿದ್ದುಪಡಿ ತರಲಾಗಿದೆ. ಐದೂ ಪಾಲಿಕೆಗಳ ಆಡಳಿತಾತ್ಮಕ ಹಾಗೂ ನೇಮಕಾತಿ ನಿಯಮಗಳ ರಚನೆ, ನೌಕರರ ನೇಮಕಾತಿ ಹೊಣೆ ಜಿಬಿಎಗೆ ಕೊಡಲು ಅವಕಾಶ ಇದೆ ಎಂದರು. ಇದನ್ನೂ ಓದಿ: ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಪ್ರತಿಕ್ರಿಯೆ
ಆದರೆ ಈ ವಿಧೇಯಕ್ಕೆ ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಶಾಸಕ ಅಶ್ವಥ್ ನಾರಾಯಣ್ ಮಾತಾಡಿ, ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ತಿದ್ದೀರಿ ಎಂದರು. ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ಗ್ರೇಟರ್ ಬೆಂಗಳೂರು ಹೆಸರನ್ನು ಕನ್ನಡದಲ್ಲಿಡುವಂತೆ ಆಗ್ರಹಿಸಿದರು. ಆದರೆ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಪರ ಬಿಜೆಪಿ ಉಚ್ಛಾಟಿತ ಶಾಸಕ ಎಸ್‌ಟಿ ಸೋಮಶೇಖರ್ ಬ್ಯಾಟಿಂಗ್ ನಡೆಸಿದರು. ಸದನದಲ್ಲೇ ಡಿಕೆಶಿಗೂ ಸೋಮಶೇಖರ್ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ
ಈ ಮಧ್ಯೆ, ಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳ್ಳಲಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಇಂದು ಬಿಜೆಪಿಯವರ ವಿರೋಧದ ಮಧ್ಯೆಯೂ ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆದುಕೊಂಡಿತು. ಇದನ್ನೂ ಓದಿ: ಸುಜಾತಾ ಭಟ್‌ಗೆ ಮಗಳೇ ಇರಲಿಲ್ಲ ಎಂದ ನೆರೆಹೊರೆಯವರು