ಲಿಯೋ ಚಿತ್ರದ ‘ನಾ ರೆಡಿದಾ ವರವಾ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

Public TV
1 Min Read

ಕಾಲಿವುಡ್​ನ ಜನಪ್ರಿಯ ನಟ ವಿಜಯ್​ (Dalpati Vijay) ಗುರುವಾರ (ಜೂನ್​ 22) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ಮಧ್ಯರಾತ್ರಿಯೇ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಈಗ ಚಿತ್ರದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆಯಾಗಿದೆ.

‘ನಾ ರೆಡಿದಾ ವರವಾ’ ಎಂಬ ಲಿರಿಕಲ್​ ಹಾಡು ಬಿಡುಗಡೆಯಾಗಿದ್ದು, ಈ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

 

‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತದವರು ಅಭಿನಯಿಸುತ್ತಿದ್ದಾರೆ.

Share This Article