ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

Public TV
1 Min Read

ಮುಂಬೈ: ಬಾಲಿವುಡ್ ಹಾಸ್ಯ ನಟ ಸುನಿಲ್ ಗ್ರೋವರ್ ಸೋಶಿಯಲ್ ಮೀಡಿಯಾದಲ್ಲಿ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸುನಿಲ್ ಅವರು ಸಣ್ಣ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನ ಪರೀಕ್ಷಿಸಿದ ವೈದ್ಯರು ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದರು. ಪರಿಣಾಮ ಸುನಿಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದು, ನಿನ್ನೆ ಟ್ವಟ್ಟರ್‌ನಲ್ಲಿ, ನನ್ನ ಚಿಕಿತ್ಸೆ ಮುಗಿದಿದೆ. ನಾನು ಈಗ ಗುಣವಾಗುತ್ತಿದ್ದೇನೆ. ನನಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ! ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

heart blockage symptoms: kapil sharma show actor sunil grover undergoes surgery for heart blockage know what is it warning signs and symptoms - Sunil Grover heart surgery: 'गुत्थी' बनकर हंसाने वाले सुनील

44 ವರ್ಷದ ಈ ನಟನನ್ನು ಕಳೆದ ವಾರ ಮುಂಬೈನ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ಗೆ ದಾಖಲಿಸಲಾಗಿತ್ತು. ಜನವರಿ 27 ರಂದು ಸುನಿಲ್ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿತ್ತು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಅವರನ್ನು ನಾಲ್ಕು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಫೆಬ್ರವರಿ 3 ರಂದು ಸುನಿಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸುನಿಲ್ ಅವರು ಕಾಮಿಡಿ ನೈಟ್ಸ್ ವಿತ್ ಕಪಿಲ್ ಮತ್ತು ದಿ ಕಪಿಲ್ ಶರ್ಮಾ ಶೋಗಳ್ಲಿ ಕಾಣಿಸಿಕೊಂಡಿದ್ದು, ಪ್ರಸಿದ್ಧ ಕಿರುತೆರೆ ನಟ. ಟೆಲಿಸಿಷನ್ ಕಾರ್ಯವನ್ನು ಹೊರತುಪಡಿಸಿ, ಸುನಿಲ್ ಇತ್ತೀಚೆಗೆ ಭಾರತ್, ಪಟಾಖಾ, ತಾಂಡವ್ ಮತ್ತು ಸೂರ್ಯಕಾಂತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ಜನರು ಸುನಿಲ್ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಸುನಿಲ್ ಈ ಹಿಂದೆ ಅಮೀರ್ ಖಾನ್ ಅವರ 2008ರ ಹಿಟ್ ಚಿತ್ರ ‘ಗಜಿನಿ’, ಅಕ್ಷಯ್ ಕುಮಾರ್ ಅವರ ‘ಗಬ್ಬರ್ ಈಸ್ ಬ್ಯಾಕ್’ ಮತ್ತು ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನಪ್ರಿಯ ಕಾಮಿಡಿ ನಟರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಸುನಿಲ್ ಅವರ ಚಿಕಿತ್ಸೆಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹಾಯ ಮಾಡಿದ್ದಾರೆ. ಸಲ್ಲು ತಮ್ಮ ವೈದ್ಯ ತಂಡವನ್ನು ಸುನಿಲ್ ಅವರನ್ನು ನೋಡಿಕೊಳ್ಳಲು ಸೂಚಿಸಿದ್ದು ಸಹ ಸುದ್ದಿಯಾಗಿತ್ತು. ಇದನ್ನೂ ಓದಿ: ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್

Share This Article
Leave a Comment

Leave a Reply

Your email address will not be published. Required fields are marked *