ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದ್ದು, ಚಿಕ್ಕಬಳ್ಳಾಪುರ ತಾಲೂಕು ಚಿಕ್ಕಕಾಡಿಗಾನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ದ್ರಾಕ್ಷಿ ತೋಟವೊಂದು ಧರೆಗುರುಳಿದಿದೆ. ಇದರಿಂದ ದ್ರಾಕ್ಷಿ ಮಣ್ಣು ಪಾಲಾಗಿದ್ದು, ರೈತ ಕಣ್ಣೀರು ಸುರಿಸಿದ್ದಾರೆ.
ರೈತ ವೆಂಕಟರೆಡ್ಡಿ ಅವರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಒಂದು ಎಕರೆ ದ್ರಾಕ್ಷಿ ತೋಟ ಮಾಡಿದ್ದರು. ಈ ಬಾರಿ ದ್ರಾಕ್ಷಿ ತೋಟದಲ್ಲಿ ಉತ್ತಮ ಫಸಲು ಬಂದಿತ್ತು. ನಿನ್ನೆಯಷ್ಟೇ ವ್ಯಾಪಾರಸ್ಥರಿಗೆ ಇಂದು ಬಂದು ದ್ರಾಕ್ಷಿ ಕಟಾವು ಮಾಡಿಕೊಳ್ಳಿ ಅಂತ ಹೇಳಿದ್ದರು. ಆದರೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸರಿಸುಮಾರು 30ಕ್ಕೂ ಅಧಿಕ ಟನ್ ದ್ರಾಕ್ಷಿ ಈಗ ಮಣ್ಣುಪಾಲಾಗಿದ್ದು ರೈತ ವೆಂಕಟರೆಡ್ಡಿ ದಿಕ್ಕು ತೋಚದಂತಾಗಿದ್ದಾರೆ. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ
ಅಕಾಲಿಕ ಮಳೆಯ ಅಬ್ಬರದಿಂದ ಇಡೀ ದಾಕ್ಷಿ ತೋಟವೇ ನಾಶವಾಗಿ ಕಲ್ಲು ಕೂಚಾ, ದ್ರಾಕ್ಷಿ ಗಿಡಗಳೆಲ್ಲವೂ ಮುರಿದು ಬಿದ್ದಿವೆ. ಈ ದ್ರಾಕ್ಷಿ ತೋಟವನ್ನ ಸಂಪೂರ್ಣ ಕಟ್ ಮಾಡಿ ತೆರವು ಮಾಡಬೇಕು ಬೇರೇನು ಮಾಡಲಾಗುವುದಿಲ್ಲ. ತೆರವು ಮಾಡಲು ಸಹ ಲಕ್ಷಾಂತರ ರೂಪಾಯಿ ವ್ಯಯ ಮಾಡಬೇಕು. ಮತ್ತೆ ದ್ರಾಕ್ಷಿ ಗಿಡ ನಾಟಿ ಮಾಡಿ ಫಸಲು ಬರುವುದಕ್ಕೆ 2 ವರ್ಷ ಬೇಕು. ಈಗಲೇ ಲಕ್ಷ, ಲಕ್ಷ ಸಾಲ ಮಾಡಿ ಬೆಳೆದಿರುವ ಬೆಳೆ ಹಾಳಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ಮಾರುಕಟ್ಟೆಯಲ್ಲಿ ಈ ಬಾರಿ ದ್ರಾಕ್ಷಿಗೆ ಡಿಮ್ಯಾಂಡ್ ಕಡಿಮೆ ಆಗಿದೆ. ಹೀಗಾಗಿ ಕೆಜಿ 20 ರಿಂದ 30 ರೂಪಾಯಿಗೆ ಬಿಕರಿಯಾಗುತ್ತಿದ್ದು ವ್ಯಾಪಾಸರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಮೊದಲೇ ತೋಟದಲ್ಲಿ ಹಣ್ಣಾಗಿರುವ ದ್ರಾಕ್ಷಿಯನ್ನು ಬಹಳ ದಿನಗಳ ಕಾಲ ಬಿಡುವಂತಿಲ್ಲ. ಬಿಟ್ಟರೆ ತೋಟ ಗಿಡ ಡ್ಯಾಮೇಜ್ ಆಗಲಿದೆ. ಹೀಗಾಗಿ ಕೊಟ್ಟಷ್ಟು ಕೊಟ್ಟು ಹಣ್ಣು ಕಟ್ ಮಾಡಿಕೊಂಡು ಹೋಗಿ ಅಂದರೂ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ. ಅಂತಹದರಲ್ಲಿ ಈಗ ಮಳೆಯ ಕಾಟ ಮಳೆಯಿಂದ ಇಡೀ ತೋಟವೇ ನಶಿಸಿ ಹೋಗಿದೆ. ದೂರದ ನೆಲಮಂಗಲಕ್ಕೆ ಹೋಗಿ ರಸಗೊಬ್ಬರ ತಂದು ಉತ್ತಮ ಫಸಲು ಬರಲಿ ಅಂತ ಕಷ್ಟಪಟ್ಟು ಬೆಳೆಸಿದ್ದೆ. ಒಂದು ದಿನ ಇದ್ದಿದ್ದೇ ದ್ರಾಕ್ಷಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈಗ 1 ರೂಪಾಯಿ ಇಲ್ಲದ ಹಾಗೆ ಮಳೆ ಇಡೀ ತೋಟವನ್ನೇ ಹಾಳು ಮಾಡಿದೆ ಅಂತ ರೈತ ವೆಂಕಟರೆಡ್ಡಿ ಕಣ್ಣೀರು ಹಾಕಿದ್ದಾರೆ.