ಯುವತಿಯರಂತೆ ಡ್ಯಾನ್ಸ್ ಮಾಡಿದ 63ರ ಅಜ್ಜಿ – ವೀಡಿಯೋ ವೈರಲ್

By
1 Min Read

ನವದೆಹಲಿ: 63 ವಯಸ್ಸಿನ ರವಿಬಾಲಾ ಶರ್ಮಾ ಅವರು ಸಾರಾ ಅಲಿ ಖಾನ್‍ರವರ ಚಕಾ ಚಕ್ ಹಾಡಿಗೆ ಅದ್ಬುತವಾಗಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರವಿಬಾಲಾ ಶರ್ಮಾ ರವರು ಈಗಾಗಲೇ ಹಲವು ವೈರಲ್ ವೀಡಿಯೋಗಳ ಮೂಲಕ ಎಲ್ಲ ನೆಟ್ಟಿಗರಿಗೆ ಚಿರಪರಿಚಿತರಾಗಿದ್ದಾರೆ. ಆದರೆ ಈಗ ಮತ್ತೊಂದು ಹೊಸ ವೀಡಿಯೋದೊಂದಿಗೆ ಮತ್ತೆ ಮರಳಿದ್ದಾರೆ. ಈ ವೀಡಿಯೋದಲ್ಲಿ ಅವರು ಸಾರಾ ಅಲಿ ಖಾನ್‍ರವರ ಚಕಾ ಚಕ್ ಹಾಡಿಗೆ ನವಯುವತಿಯರು ನಾಚುವಂತೆ ನೃತ್ಯ ಮಾಡಿದ್ದಾರೆ. ಕ್ರೇಜಿ ವೈರಲ್ ಆದ ಈ ವೀಡಿಯೋ ಈಗಾಗಲೇ ಸುಮಾರು 3 ಲಕ್ಷ ವಿಕ್ಷಣೆಗಳನ್ನು ಪಡೆದಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

ವೈರಲ್ ಆದ ಈ ವೀಡಿಯೋದಲ್ಲಿ ಸಾರಾ ಅಲಿ ಖಾನ್, ಹಾಗೆಯೇ ಹಸಿರು ಬಣ್ಣದ ಸೀರೆ ಧರಿಸಿರುವದನ್ನು ನೀವು ಕಾಣಬಹುದಾಗಿದೆ. ರವಿಬಾಲಾರವರು ಡಾನ್ಸ್ ಮಾಡುವ ಸಂದರ್ಭದಲ್ಲಿ ಅವರ ಮುಖದ ಭಾವನೆಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

View this post on Instagram

 

A post shared by Ravi Bala Sharma (@ravi.bala.sharma)

ಚಕಾ ಚಕ್ ಹಾಡು ಅಕ್ಷಯ ಕುಮಾರ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಮುಂಬರುವ ಅತ್ರಾಂಗಿ ರೇ ಚಿತ್ರದ ಹಾಡಾಗಿದೆ. ಎ ಆರ್ ರೆಹಮಾನ್ ರವರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಶ್ರೇಯಾ ಘೋಷಾಲ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

Share This Article
Leave a Comment

Leave a Reply

Your email address will not be published. Required fields are marked *