ದಾವಣಗೆರೆ: ಮಗ ಮತ್ತು ಮೊಮ್ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಜ್ಜ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಂದೆ ಸೈಯದ್ ಅಸ್ಲಂ(55), ಮಗ ಸೈಯದ್ ಅಕಿಲ್(37) ಮತ್ತು ತಾತ ಸೈಯದ್ ಮಹಮ್ಮದ್ ಮೃತ ದುರ್ದೈವಿಗಳು. ಭಾನುವಾರ ಚನ್ನಗಿರಿ ತಾಲೂಕಿನ ಗುಳ್ಳಳ್ಳಿ ಕ್ರಾಸ್ ಬಳಿ ಬೈಕಿಗೆ ಬೊಲೆರೋ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ತಂದೆ-ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಗ ಮತ್ತು ಮೊಮ್ಮಗ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಮನೆಯಲ್ಲಿದ್ದ ತಾತ ಸೈಯದ್ ಮಹಮ್ಮದ್‍ಗೆ ಹೃದಯಾಘಾತವಾಗಿದ್ದು, ಅವರೂ ಕೂಡ ಮೃತಪಟ್ಟಿದ್ದಾರೆ. ಇದೀಗ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಈ ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.