ಜನ್ಮದಿನದಂದು ಬೈಕ್ ಸವಾರರಿಗೆ ಹೆಲ್ಮೆಟ್ – ಗಿಫ್ಟ್ ನೀಡಿದ ಗ್ರಾ.ಪಂ ಉಪಾಧ್ಯಕ್ಷ

Public TV
1 Min Read

ಬೀದರ್: ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಸಿಸಿಟಿವಿ ಕ್ಯಾಮರಾವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರು ಕೊಡುಗೆಯಾಗಿ ನೀಡಿದ್ದಾರೆ.

ಜಿಲ್ಲೆಯ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರು 33ನೇ ಹುಟ್ಟುಹಬ್ಬದಂದು 33 ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಹುಟ್ಟೂರಿಗೆ ಸಿಸಿಟಿವಿ ಕ್ಯಾಮರಾ ಕೊಡುಗೆಯಾಗಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.ಇದನ್ನೂ ಓದಿ: ಮದುವೆಯಾಗಿ ಒಂದು ತಿಂಗಳ ಬಳಿಕ ಕೊನೆಗೂ ಸತ್ಯ ಕಕ್ಕಿದ ಹನಿಮೂನ್ ಹಂತಕಿ – ತಪ್ಪೊಪ್ಪಿಕೊಂಡ ಸೋನಮ್ ರಘುವಂಶಿ

ಯಾಕತಪುರದಲ್ಲಿ ಮೂರು ಸಿಸಿಟಿವಿ ಕ್ಯಾಮೆರಾ ಹಾಗೂ ರಸ್ತೆ ಸುರಕ್ಷತೆ ಜಾಗೃತಿ, ಜನರ ಜೀವ ಉಳಿಸಲು ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಪ್ರಮುಖ ಸ್ಥಳಗಳಲ್ಲಿ ಅಳವಡಿಸುವುದಕ್ಕಾಗಿ ಸಿಸಿಟಿವಿ ಕ್ಯಾಮೆರಾ ನೀಡಿದ್ದಾರೆ.

ಇದೇ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಮಾತನಾಡಿ, ನರಸಪ್ಪ ಅವರು ಸಾಮಾಜಿಕ ಕಾರ್ಯಗಳೊಂದಿಗೆ ಜನ್ಮದಿನ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಈ ವೇಳೆ ಪಿಡಿಒ ರಾಮಣ್ಣ, ಪಂಚಾಯಿತಿ ಸದಸ್ಯ ಸಲೀಮೊದ್ದಿನ್, ಪ್ರಮುಖರಾದ ಪಂಢರಿ ವರ್ಮಾ, ಚಂದ್ರಶೇಖರ ಪಾಟೀಲ, ಸುಧಾಕರ ರಾಜಗೀರಾ, ಅಶೋಕ ಜಾನಕನೋರ ಇದ್ದರು.ಇದನ್ನೂ ಓದಿ: ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

Share This Article