ನೆಲಮಂಗಲ | ತಣ್ಣಗಾಗಿದ್ದ ಏರಿಯಾದಲ್ಲಿ ಮತ್ತೆ ರೌಡಿಸಂ – ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ

Public TV
1 Min Read

ನೆಲಮಂಗಲ: ಇಲ್ಲಿನ ಇಸ್ಲಾಂಪುರ (Islampura) ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ನಡೆದಿದೆ. ಗ್ರಾಮದಲ್ಲಿ ರೌಡಿಸಂ ತಣ್ಣಗಾಗಿ, ನೆಲಮಂಗಲದಲ್ಲಿ (Nelamangala) ಏನೂ ಸಮಸ್ಯೆ ಇಲ್ಲ ಎಲ್ಲವೂ ಸರಿಯಾಗಿದೆ ಎನ್ನೂವಾಗಲೆ ಮತ್ತೆ ಆ ಗ್ರಾಮದಲ್ಲಿ ಗನ್‌ ಸೌಂಡ್‌ ಮಾಡಿ ಜನರ ಆತಂಕಕ್ಕೆ ಕಾರಣವಾಗಿದೆ.

ಕಣೇಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಸಲೀಂ ಮನೆ ಮುಂದೆ ಬಂದ ಇಬ್ಬರು ವ್ಯಕ್ತಿಗಳಿಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಮಾತನಾಡುವ ವೇಳೆ ಏಕಾಏಕಿ ಗುಂಡಿನ ದಾಳಿ ಮಾಡಿ ಅಪರಿಚಿತರು ಎಸ್ಕೇಪ್ ಆಗಿದ್ದಾರೆ. ಅವರ ಕೈಗೆ ಗಾಯವಾಗಿದ್ದು, ಇತ್ತ ಗಾಯಾಳು ಸಲೀಂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಇದನ್ನೂ ಓದಿ: ಒನ್‌ಸೈಡ್‌ ಲವ್‌ – ಪ್ರೀತಿಸಿದ ಹುಡ್ಗಿಯ ಲಗ್ನ ಪತ್ರಿಕೆ ನೋಡಿ ಯುವಕ ಆತ್ಮಹತ್ಯೆ!

ಘಟನೆ ಬಗ್ಗೆ ಮಾತಾಡಿರುವ ಸಲೀಂ ಸಂಬಂಧಿ ಫಿರ್ದೋಸ್, ಇದು ರಾಜಕೀಯ ದುರುದ್ದೇಶದಿಂದ ಮಾಡಿರೋ ಕೃತ್ಯ. ಸಂಜೆ 6 ಗಂಟೆ ಸುಮಾರಿಗೆ ಸಲೀಂ ನಮಾಝ್ ಮುಗಿಸಿ ಅಂಗಡಿಯೊಂದರ ಮುಂದೆ ಕುಳಿತಿದ್ರು. ಆಗ ಗಾಡಿಯಲ್ಲಿ ಬಂದ ಒಬ್ಬ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸುವಾಗ ಮುಬಾರಕ್ ಪಾಷ ಕಡೆಯವನು ಎಂದು ಹೇಳಿ ಗುಂಡು ಹಾರಿಸಿದ್ದಾನೆ. ಬಳಿಕ ಗಾಡಿಯಲ್ಲಿ ಪರಾರಿಯಾಗಿದ್ದಾರೆ. ಅವರು ಯಾರು ಅನ್ನೋದು ಗೊತ್ತಿಲ್ಲ. ಇದು ರಾಜಕೀಯ ಉದ್ದೇಶದಿಂದ ಮಾಡಿರೋದು ಎಂದು ಆರೋಪಿಸಿದ್ದಾರೆ.

ಈ ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆ, ನೆಲಮಂಗಲ ಪೊಲೀಸರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಶಿಫ್ಟ್ ಮಾಡಿದ್ದಾರೆ. ಇನ್ನೂ ಈ ಘಟನೆಯಿಂದ ಮತ್ತೆ ನೆಲಮಂಗಲ ರೌಡಿಸಂ ಶುರುವಾಯಿತಾ ಎಂಬ ಆತಂಕದಲ್ಲಿ ಜನಸಾಮಾನ್ಯರು ಇದ್ದಾರೆ. ಇದನ್ನೂ ಓದಿ: Anekal | ಕಂದಕಕ್ಕೆ ಉರುಳಿದ ಕಂಟೈನರ್ ಲಾರಿ – ಇಬ್ಬರು ದುರ್ಮರಣ, ನಾಲ್ವರು ಗಂಭೀರ

Share This Article