ಬಾಲಕೃಷ್ಣ, ಶಿವರಾಂ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಪರಮೇಶ್ವರ್

Public TV
1 Min Read

ಬೆಂಗಳೂರು: ಶಾಸಕ ಬಾಲಕೃಷ್ಣ ಹೇಳಿಕೆ ಮತ್ತು ಕಾಂಗ್ರೆಸ್ (Congress) ನಾಯಕ ಬಿ. ಶಿವರಾಂ ಹೇಳಿಕೆ ಅವರ ವೈಯಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ 50% ಕಮಿಷನ್ ಇದೆ ಎಂಬ ಶಿವರಾಂ ಹೇಳಿಕೆ ಹಾಗೂ ಗ್ಯಾರಂಟಿ ರದ್ದು ಮಾಡಲಾಗುತ್ತದೆ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಸಿಎಂ ಗಮನಕ್ಕೆ ಅವರು ತಂದಿದ್ದರೆ ಸಿಎಂ ಕ್ರಮ ತೆಗೆದುಕೊಳ್ತಾರೆ. ಶಿವರಾಂ ಹೇಳಿಕೆ, ಬಾಲಕೃಷ್ಣ ಹೇಳಿಕೆಗಳು ವೈಯಕ್ತಿಕ ಹೇಳಿಕೆಗಳು. ಅವು ಪಕ್ಷದ ಹೇಳಿಕೆಗಳಲ್ಲ. ಅವರು ಏನೋ ಹೇಳಿರುತ್ತಾರೆ. ಅದು ಅವರ ವಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಗ್ಗೆ ಡಿನ್ನರ್ ಮೀಟಿಂಗ್‍ನಲ್ಲಿ ಚರ್ಚೆ: ಪರಮೇಶ್ವರ್

ತುಮಕೂರಿನಿಂದ ಮುದ್ದ ಹನುಮೇಗೌಡ ಅವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಟಿಕೆಟ್ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷದಲ್ಲಿ ಯಾರಿಗೆ ತೀರ್ಮಾನ ಮಾಡಿ ಟಿಕೆಟ್ ಕೊಡ್ತಾರೋ ಅವರಿಗೆ ನಾವು ಕೆಲಸ ಮಾಡುತ್ತೇವೆ. ನಮ್ಮ ಅಭಿಪ್ರಾಯ ಪಕ್ಷಕ್ಕೆ ಹೇಳಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ರೆ ಮತ್ತೊಂದೆಡೆ ಮೋದಿ ಇದ್ದಾರೆ: ಈಶ್ವರಪ್ಪ

Share This Article