ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಇನ್ನೂ ತಿಳಿಸದ ಸರ್ಕಾರ

Public TV
1 Min Read

ಬೆಂಗಳೂರು: ಇಂದು 62ನೇ ಕನ್ನಡ ರಾಜೋತ್ಸವ. ಎಲ್ಲೆಲ್ಲೂ ಕನ್ನಡದ ಕಂಪು ಹರಡಿದೆ. ನಾಡು-ನುಡಿಯ ಸಂಭ್ರಮದಲ್ಲಿ ನಾಡಗೀತೆಗೆ ಅಪಮಾನ ಮಾಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಸರ್ಕಾರ ತಿಳಿಸಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಕುವೆಂಪು ರಚಿತ ವಿಶಾಲವಾದ ನಾಡಗೀತೆಯನ್ನು ಪರಿಷ್ಕರಣೆ ಮಾಡಿದ್ದು, ಕಡಿಮೆ ಸಮಯದಲ್ಲಿ ನಾಡಗೀತೆಯನ್ನು ಪರಿಷ್ಕರಿಸಲು ರಚಿಸಿದ್ದ ಕಮಿಟಿ ವರದಿ ನೀಡಿ ಸುಮಾರು 2 ವರ್ಷ ಕಳೆದಿದೆ. ಆದರೂ ನಾಡಗೀತೆಯ ಬಗ್ಗೆ ಸರ್ಕಾರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ 62ನೇ ಕನ್ನಡ ರಾಜ್ಯೋತ್ಸವವು ಪರಿಷ್ಕೃತ ನಾಡಗೀತೆಯಿಲ್ಲದೆ ಸಂಭ್ರಮಿಸುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಸಾಹಿತಿ ಚೆನ್ನವೀರ ಕಣವಿ ನೇತೃತ್ವದಲ್ಲಿ ಸರ್ಕಾರದ ದೊಡ್ಡದಾಗಿದ್ದ ನಾಡಗೀತೆಯನ್ನ ಪರಿಷ್ಕರಿಸಿ, 2 ರಾಗಗಗಳ ಸಂಯೋಜನೆ ಮಾಡುವಂತೆ ಸಮಿತಿಯನ್ನು ರಚಿಸಿತ್ತು. ಸಮಿತಿ ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ಎರಡು ರಾಗ ಸಂಯೋಜನೆಯೊಂದಿಗೆ ವರದಿ ನೀಡಿತ್ತು. ನಾಡಗೀತೆಯನ್ನ ಪೂರ್ಣ ಸಾಲುಗಳೊಂದಿಗೆ 2 ನಿಮಿಷ 20 ಸೆಕೆಂಡ್‍ಗಳಲ್ಲಿ ಹಾಡೋದು ಹಾಗೂ ಪರಿಷ್ಕೃತ ನಾಡಗೀತೆಯನ್ನ 1 ನಿಮಿಷ 30 ಸೆಕೆಂಡ್‍ಗಳಲ್ಲಿ ಸಿ.ಅಶ್ವಥ್ ಸಂಯೋಜನೆಯ ರಾಗದಲ್ಲಿ ಹಾಡಲು ವರದಿ ನೀಡಿತ್ತು.

ಸರ್ಕಾರ ಸಮಿತಿಯ ಪರಿಷ್ಕøತ ನಾಡಗೀತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‍ಸೈಟ್‍ಗೆ ಹಾಕಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿತ್ತು. ಅಭಿಪ್ರಾಯ ಸಂಗ್ರಹಿಸಿದ್ದರೂ ಸರ್ಕಾರ ಈವರೆಗೂ ನಾಡಗೀತೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಈ ರೀತಿಯ ವರ್ತನೆಗೆ ಸಾಹಿತಿ ಬರಗೂರು ರಾಮಚಂದ್ರ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *