ಬಿಜೆಪಿ ಜೊತೆಗೆ ಚುನಾವಣೆ ಎದುರಿಸಿ, ಆರ್‌ಎಸ್‌ಎಸ್‌ ಜೊತೆಗಲ್ಲ: ಗೋವಿಂದ ಕಾರಜೋಳ

Public TV
3 Min Read

– ಆರ್‌ಎಸ್‌ಎಸ್‌ ಒಂದು ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಸಂಸ್ಥೆ

ಬಾಗಲಕೋಟೆ: ಬಿಜೆಪಿ ಪಕ್ಷದ ಜೊತೆಗೆ ಚುನಾವಣೆ ಎದುರಿಸಿ. ಆರ್‌ಎಸ್‌ಎಸ್‌ ಜೊತೆಗೆ ಅಲ್ಲ, ಹೀಗಾಗಿ ವಿನಾಕಾರಣ ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತನಾಡಬೇಡಿರಿ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರಿಗೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ನ ಸರ್ವಸ್ವವನ್ನೂ ತ್ಯಾಗ ಮಾಡಿ, ತಮ್ಮ ಪೂರ್ವಾಶ್ರಮವನ್ನು ತೊರೆದು ಬಂದು, ಕೇಶವ ಕೃಪಾದಲ್ಲಿ, ಸಂತರಾಗಿ, ಶರಣರಾಗಿ ಶೂಫಿ ಸಂತರಾಗಿ ಜೀವನ ಮಾಡುತ್ತಿದ್ದಾರೆ. ಅಲ್ಲಿ ಜಾತಿ ಧರ್ಮ ಯಾವುದು ಇಲ್ಲಾ.ಕೇಶವ ಕೃಪಾದಲ್ಲಿ ಯಾವ ಜಾತಿಯರು ಇದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ವಿನಾಕಾರಣ ನಮ್ಮ ರಾಷ್ಟ್ರೀಯ ಸ್ವಯಂ ಸೇವಕರ ಸಂಸ್ಥೆಯನ್ನು ತರಲಿಕ್ಕೆ ಹೋಗಬೇಡಿರಿ ಎಂದು ಎಚ್ಚರಿಕೆ ನೀಡಿದರು. ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ

ಬಿಜೆಪಿ ಜೊತೆ ಚುನಾವಣೆ ಮಾಡಬೇಕು, ಆರ್‌ಎಸ್‌ಎಸ್‌ ಜೊತೆಗೆ ಅಲ್ಲ. ಈ ಸಂಸ್ಥೆ ಯಾವುದೇ ಒಂದು ಪಕ್ಷಕ್ಕೆ ಸಿಮೀತವಾಗಿಲ್ಲ. ಭಾರತೀಯ ಸಂಸ್ಕೃತಿ ಉಳಿಸಬೇಕು, ಬೆಳಸಬೇಕು, ಧರ್ಮವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಸಂಸ್ಥೆ. ಅದರ ಬಗ್ಗೆ ಕುಮಾರಸ್ವಾಮಿ ಅವರು ವಿನಾಕಾರಣ ಚರ್ಚೆಗೆ ಬರುವುದು ಬೇಡಾ ಎಂದು ವಿರೋಧ ಪಕ್ಷದವರಿಗೆ ಹೇಳಿದ್ದಾರೆ. ಕುಮಾರಸ್ವಾಮಿಗೆ ಗೊಂಬೆ ಆಡಿಸೋದು ಚನ್ನಾಗಿ ಗೊತ್ತು: ಶ್ರೀರಾಮುಲು

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಆರೋಪ ಮಾಡಿದ್ದ ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ಇನ್ನೂ ಸ್ವಲ್ಪ ದಿನ ದೇಶದಲ್ಲಿ ಇಂತಹವರು ಆಡಳಿತದಲ್ಲಿ ಇದ್ದರೆ, ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುತ್ತಿತ್ತು. ಅದರ ಬಗ್ಗೆ ತಲೆ ಕೇಡಿಸುವುದು ಬೇಡಾ ಎಂದು ತಿರುಗೇಟು ನೀಡಿ, ಕಾಶ್ಮೀರ ದಿಂದ ಕನ್ಯಾಕುಮಾರಿವರಿಗೆ ಈ ದೇಶ ಅಖಂಡ ಭಾರತ ಒಂದು ಎಂದು ಉಳಿಸುವ ಸಲುವಾಗಿ, ನರೇಂದ್ರ ಮೋದಿ ಅವರ ಸರ್ಕಾರ ವಿಶೇಷ ಸ್ಥಾನ ಮಾನ 370 ಕಲಮು ರದ್ದು ಮಾಡಿ, ಅಲ್ಲಿ ಇರುವವರೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅಲ್ಲಿನ ದೀನ ದಲಿತರಿಗೆ, ಅಸ್ಪೃಶ್ಯ ರಿಗೆ ಮೀಸಲಾತಿ ವ್ಯವಸ್ಥೆ ಇರಲಿಲ್ಲ. ಇವತ್ತು ಮೀಸಲಾತಿ ಜಾರಿಗೆ ಬಂತು. ಭಾರತದ ಇತರ ರಾಜ್ಯಗಳಲ್ಲಿ ಇರುವಂತಹ ಪ್ರಜೆಗಳಿಗೆ ಎನು ಸ್ಥಾನ ಮಾನ ಇದೆ. ಆ ಎಲ್ಲ ಸ್ಥಾನ ಮಾನವನನ್ನು ಕೂಡುವಂತಹ ಕೆಲಸವನ್ನು ಬಿಜೆಪಿ ಪಕ್ಷದ ನರೇಂದ್ರ ಮೋದಿ ಅವರ ಸರ್ಕಾರ ಮಾಡಿದೆ. ಅದನ್ನು ಎಲ್ಲರೂ ನೆನಪಿನಲ್ಲಿ ಇಡಬೇಕು ವಿನಾಕಾರಣ ಟೀಕೆ ಟಿಪ್ಪಣಿ ಮಾಡಬಾರದು ಎಂದರು.ಇದನ್ನೂ ಓದಿ:  ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ

ಕೊಪ್ಪಳ ಜಿಲ್ಲೆಯ ಏತ ನೀರಾವರಿ ಮಾಡುವ ಬಗ್ಗೆ ಎರಡು ತಿಂಗಳನಲ್ಲಿ ಪ್ರಾಯೋಗಿಕವಾಗಿ ವಾಗಿ ಚಾಲನೆ ನೀಡಿಲಾಗುವುದು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕ ಸೇರಿದಂತೆ ಕೊಪ್ಪಳ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಯೋಜನೆ ಸದುಪಯೋಗ ಆಗಲಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ್ ಆಚಾರ್ ಸೇರಿದಂತೆ ಕೆಲ ಶಾಸಕರು ಹಾಗೂ ಎರಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವಾಗಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *