ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ: ಕಾರಜೋಳ

Public TV
2 Min Read

ಬೆಳಗಾವಿ: ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ 130 ರಿಂದ 140 ಸೀಟು ಬರುತ್ತದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಬಂದ ಪಕ್ಷದ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ನ್ಯಾಯದಡಿ ಮಾಡಿದ ಕೆಲಸ ಪರಿಶೀಲನೆ ಮಾಡಿ ಮತ ಹಾಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮಾಡಿದ ಕಾರ್ಯಕ್ಕೆ ಜನ ಅನುಮೋದನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು 130 ರಿಂದ 140 ಸೀಟು ಬರುತ್ತದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

ಕಾಂಗ್ರೆಸ್ ಪರಿಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಹೊಸ ನಾಯಕತ್ವದ ಅಜೆಂಡಾ ನಮ್ಮ ಮುಂದೆ ಇಲ್ಲ. ಹೈಕಮಾಂಡ್ ಮುಂದೆಯೂ ಇಲ್ಲ ಎಂದರು.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇದು ಸಚ್ಚಾರಿತ್ರ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಸಿಕ್ಕಿರುವ ಜಯ. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಕರಿದ್ದಾರೆ. ಯುವಕರು ಜಾತಿ ವ್ಯವಸ್ಥೆಗೆ ಅಂಟಿಕೊಂಡಿಲ್ಲ. ದೇಶದ ಘನತೆ ಗೌರವ ಎತ್ತಿ ಹಿಡಿಯುವಂತಹ ಪಕ್ಷಕ್ಕೆ ಅವರು ಬೆಂಬಲಿಸುತ್ತಿದ್ದಾರೆ. ಅವರಿಗೆ ಜಾತಿ – ಧರ್ಮ ಮುಖ್ಯವಲ್ಲ. ಯುವಕರು ದೇಶದ ಏಕತೆ, ಐಕ್ಯತೆ ಸಮಗ್ರ ಅಭಿವೃದ್ಧಿ ಬಯಸಿದ್ದಾರೆ. ಇಡೀ ದೇಶಕ್ಕೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇತಿಹಾಸದ ಪುಟ ಸೇರುತ್ತದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಬರೋವರೆಗೂ ಕಾಯಲಿ. ಕಾಂಗ್ರೆಸ್ 60 ವರ್ಷ ಜಾತಿ-ಧರ್ಮದಲ್ಲಿ ಆಡಳಿತ ಮಾಡಿ ಸ್ಕ್ರ್ಯಾಪ್ ಆಗಿ ಮೂಲೆ ಗುಂಪಾಗುತ್ತಿದೆ. ಕಾಂಗ್ರೆಸ್ ಅವರಿಗೆ ಜಾತಿ ಭಾವನೆ, ಮತೀಯ ಭಾವನೆ, ಧರ್ಮದ ಭಾವನೆ ಎಬ್ಬಿಸುವುದೇ ಕೆಲಸವಾಗಿದೆ. ಬಡವರನ್ನು ಯಾವತ್ತೂ ಅವರು ನೋಡಲೇ ಇಲ್ಲ. ಬಡವರು ಬಡವರಾಗಿಯೇ ಇರಬೇಕು ಎಂಬುದು ಕಾಂಗ್ರೆಸ್ ಮನಸ್ಥಿತಿ. ಅಲ್ಪಸಂಖ್ಯಾತರು ಅವಿದ್ಯಾವಂತರಾಗಿಯೇ ಇರಬೇಕು. 403 ಸೀಟ್ ಇರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ 2 ಸೀಟು ಬರುತ್ತೆ ಆದರೆ ನಾಚಿಕೆ ಬರಬೇಕು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಫಾಲ್ಸ್‌ನಲ್ಲಿ ಮುಳುಗಿ RSS ಕಾರ್ಯಕರ್ತ ಸಾವು!

ಉಗ್ರರು ಹುಟ್ಟಿಕೊಂಡಿದ್ದೆ ಕಾಂಗ್ರೆಸ್ ಅವರ ಆಡಳಿತದಲ್ಲಿ. ಈಗ ಬೇರೆ-ಬೇರೆ ಪಕ್ಷಗಳು ಆಡಳಿತಕ್ಕೆ ಬಂದ ಮೇಲೆ ಉಗ್ರರು ಕಡಿಮೆ ಆಗುತ್ತಿದ್ದಾರೆ. ಕಾಂಗ್ರೆಸ್ ಅವರು ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸುಸಂಸ್ಕೃತ ಭಾಷೆಯಲ್ಲಿ ಮಾತನಾಡುವುದನ್ನು ಅವರು ಕಲಿತಿಲ್ಲ. ಅವರ ಅಸಂಸ್ಕøತ ಹೇಳಿಕೆಗಳು ಮೀಡಿಯಾದಲ್ಲಿ ಇಡೀ ದಿನ ಸುದ್ದಿಯಾಗುತ್ತವೆ. ಕಾಂಗ್ರೆಸ್‍ನ ಬಂಡತನಕ್ಕೆ ಇವತ್ತು ಜನ ಪಾಠ ಕಲಿಸಿದ್ದಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *