ನಿಮಗೂ ವಯಸ್ಸಾಗಿದೆ, ಅಧ್ಯಕ್ಷರ ಅವಧಿ ಮುಗಿಯೋದ್ರಲ್ಲಿ ದಲಿತ ಸಿಎಂ ಮಾಡಿ – ಖರ್ಗೆಗೆ ಕಾರಜೋಳ ಸವಾಲ್

By
1 Min Read

ಬೀದರ್: ನಿಮಗೂ ವಯಸ್ಸಾಗಿದೆ, ನಿಮ್ಮ ಅಧ್ಯಕ್ಷ ಸ್ಥಾನ ಮುಗಿಯುವಷ್ಟರಲ್ಲಿ ದಲಿತ ಸಿಎಂ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govind Karjol) ಸವಾಲು ಹಾಕಿದ್ದಾರೆ.ಇದನ್ನೂ ಓದಿ: ಸಿನಿಮಾ ಇಲ್ಲದೇ ಬದುಕೋ ಶಕ್ತಿ ನಮ್ಗೆ ಇದೆ: ಡಿ.ಕೆ ಶಿವಕುಮಾರ್

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಗೂಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಯಾರಿಗೂ ಸಂಬಳ ಬಂದಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇಲ್ಲಿಯವರೆಗೂ 14 ಸಾವು, 35 ಸಾವಿರ ಕೋಟಿ ರೂ, ನುಂಗಿ ನೀರು ಕುಡಿದಿದ್ದಾರೆ. ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ. ಸಿದ್ದರಾಮಯ್ಯವರೇ ಇದೇನಾ ಸಾಮಾಜಿಕ ನ್ಯಾಯ? ಇದು ನ್ಯಾಯ ಅಲ್ಲ, ಅನ್ಯಾಯ. 7 ಲಕ್ಷ ಕೋಟಿ ರೂ.ಯ ಬಜೆಟ್ ಮಾಡುತ್ತಿದ್ದೀರಿ, ನೀವು ಜಿಲ್ಲೆಗೆ 60 ಸಾವಿರ ಕೋಟಿ ರೂ. ಅನುದಾನ ಕೊಡಬೇಕು. ಅಹಿಂದ ನಾಯಕರಿಂದ ಮಹಾ ಮೋಸವಾಗಿದೆ. ದಲಿತ ಸಚಿವರಿಗೆ ಮಾನ ಮರ್ಯಾದೆ ಇಲ್ಲ. ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಕಿಡಿಕಾರಿದರು.

ಎರಡು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಖರ್ಗೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಾಡಿದ್ದು ಯಾಕೆ? ಖರ್ಗೆಯನ್ನು ಮುಳಗುವ ಹಡಗಿನ ಅಧ್ಯಕ್ಷ ಮಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸರ್ವಾಧಿಕಾರಿಗಳು. ಖರ್ಗೆ ನಿಮ್ಮಗೆ ತಾಕತ್ತಿದ್ದರೆ ರಾಜ್ಯದಲ್ಲಿ ದಲಿತ ಸಿಎಂ ಮಾಡಿ, ನಿಮಗೂ ವಯಸ್ಸಾಗಿದೆ ಅಧ್ಯಕ್ಷ ಸ್ಥಾನ ಮುಗಿಯುವಷ್ಟರಲ್ಲಿ ದಲಿತ ಸಿಎಂ ಮಾಡಿ. ನಿಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಕೊಡುತ್ತೇನೆ ಎಂದು ಹೇಳಿದ್ದೀರಿ, ನೀವು ಆದೇಶ ಜಾರಿ ಮಾಡಿ, ಇಲ್ಲಿರುವವರಿಗೆ ದಲಿತರು ಮೇಲೆ ಬರುವುದು ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಮ್ಯಾನೇಜರ್ ಸ್ಪಷ್ಟನೆ

Share This Article