ಸರ್ಕಾರದ 32 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

Public TV
1 Min Read

– ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ 3 ಮಸೂದೆಗಳು ರಾಷ್ಟ್ರಪತಿ ಅಂಗಳಕ್ಕೆ

ಬೆಂಗಳೂರು: ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿದಂತೆ 32 ಮಸೂದೆಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

ರಾಜ್ಯಪಾಲರಿಗೆ ಸರ್ಕಾರ 37 ಮಸೂದೆಗಳನ್ನು ಕಳಿಸಿತ್ತು. ಈ ಪೈಕಿ 32 ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ರಾಜ್ಯಪಾಲರು ಅನುಮೋದಿಸಿದ ಮಸೂದೆಗಳು ಕಾಯ್ದೆಗಳಾಗಿ ಜಾರಿಯಾಗಲಿವೆ. ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ರಾಷ್ಟ್ರಪತಿಗಳ ಅಂಗಳಕ್ಕೆ ರಾಜ್ಯದ ಮೂರು ಮಸೂದೆಗಳು
ಮೂರು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಕಳುಹಿಸಿದ್ದಾರೆ. ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ- 2025, ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ- 2025, ನೋಂದಣಿ ಮಸೂದೆ-2025 ಮಸೂದೆಗಳು ರಾಷ್ಟ್ರಪತಿಗಳ ಬಳಿಗೆ ಹೋಗಿವೆ.

Share This Article