ಯುವಜನತೆ ಜಗತ್ತಿನಲ್ಲಿ ಶಾಂತಿ ವಿಸ್ತರಿಸುವ ಕೆಲಸ ಮಾಡಲಿ: ರಾಜ್ಯಪಾಲ

Public TV
1 Min Read

ಬೆಂಗಳೂರು: ಭಾರತೀಯ ಸಂಸ್ಕೃತಿಯು “ಸರ್ವ ಧರ್ಮ ಸಂಭವ” ಮತ್ತು “ವಸುಧೈವ ಕುಟುಂಬಕಂ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ. ಯಾವಾಗಲೂ ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಇಸ್ಕಾನ್ ಶೇಷಾದ್ರಿಪುರಂ ವತಿಯಿಂದ ನಗರದ ಶೇಷಾದ್ರಿಪುರಂನಲ್ಲಿ ನಿರ್ಮಾಣವಾಗಿರುವ ಜಗನ್ನಾಥ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ತತ್ವಶಾಸ್ತ್ರ, ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿ ಬಹಳ ಪುರಾತನವಾಗಿದ್ದು ಇಂದಿಗೂ ಪ್ರಸ್ತುತವಾಗಿವೆ. ಇದರ ಅನುಕರಣೆಯಿಂದ ಲೋಕಕಲ್ಯಾಣ ಮತ್ತು ಶಾಂತಿಯ ದಿಶೆಯಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.  ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

ಇಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಅವಶ್ಯಕತೆಯಿದೆ. ಅದರ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರು ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಜಗತ್ತಿನಲ್ಲಿ ಶಾಂತಿ ವಿಸ್ತರಿಸುವ ಕೆಲಸವನ್ನು ಮಾಡಲಿ ಎಂದರು.

ಪರಮಪೂಜ್ಯ ಜಯಪತಾಕ ಸ್ವಾಮಿ ಮಹಾರಾಜ್, ಪರಮಪೂಜ್ಯ ಭಾನು ಸ್ವಾಮಿ ಮಹಾರಾಜ್, ದಕ್ಷಿಣ ಭಾರತದಲ್ಲಿ ಕೃಷ್ಣ ಭಕ್ತಿಯ ಪ್ರಚಾರಕ ವಿನೋದ ಸ್ವಾಮಿ, ಇಸ್ಕಾನ್ ಶೇಷಾದ್ರಿಪುರಂ ದೇವಾಲಯದ ವ್ಯವಸ್ಥಾಪಕರು, ಗೌರವಾನ್ವಿತ ಅನುಕೂಲ್ ಕೇಶವ್ ಉಪಸ್ಥಿತರಿದ್ದರು.

Live Tv

Share This Article
Leave a Comment

Leave a Reply

Your email address will not be published. Required fields are marked *