ಬೀದರ್: ವಿಷ್ಣುವರ್ಧನ್ ಓರ್ವ ಮೇರು ನಟ. ಹೀಗಾಗಿ ಅವರ ಸಮಾಧಿ ಎಲ್ಲಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿಯಮ, ಕಾಯ್ದೆ, ಕಾನೂನುಗಳ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ, ಯಾವ ರೀತಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡುತ್ತಾರೆ ಎಂದರು.ಇದನ್ನೂ ಓದಿ: ಬಾನು ಮುಷ್ತಾಕ್ ದೇವಿ ಪೂಜೆ ಮಾಡಿದ್ರೆ ಫತ್ವಾ ಇನ್‌ಸ್ಟಿಟ್ಯೂಷನ್ ಅನುಮತಿ ಪಡೆಯಬೇಕು:ಮಕ್ಸೂದ್ ಇಮ್ರಾನ್
ನಮ್ಮ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ, ಇದು ರೋಟಿನ್ ಕೆಲಸವಾಗಿದ್ದು, ಪ್ರಗತಿ ಪರಿಶೀಲನೆ ಮಾಡುವಾಗ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಸಮಯ ತಕ್ಕಂತೆ ನಾನು ಸೂಚನೆ ಹಾಗೂ ಆದೇಶಗಳನ್ನು ಕೊಡುತ್ತಿದ್ದು, ಬೆಂಗಳೂರಿಗೆ ಹೋಗಿ ವಿಷ್ಣು ಸಮಾಧಿ ಜಾಗದ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ಯಾವುದು ಅರಣ್ಯ ಭೂಮಿ ಅದು ಉಳಿದೇ ಉಳಿಯುತ್ತದೆ. HMT ಜಾಗ ಅಂತ ಯಾರಿಗೆ ಗೊತ್ತಿತ್ತಾ? ನನ್ನ ಗಮಕ್ಕೆ ಬಂದ ತಕ್ಷಣ ನಾನು ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ಇಲಿ ಗಣೇಶನ ವಾಹನವಾಗಿದ್ದು ಹೇಗೆ?