ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ – 7 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

Public TV
2 Min Read

– ಕಾಡಂಚಿನ ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ಭಾಗ್ಯ

ಚಿಕ್ಕಮಗಳೂರು: ಇತ್ತೀಚಿಗೆ ಏಳೆಂಟು ಜನ ನಕ್ಸಲರು (Naxalites) ಸೆರೆಂಡರ್ ಆಗುವಾಗ ಸರ್ಕಾರಕ್ಕೆ ಮಲೆನಾಡು (Malenadu) ಅಭಿವೃದ್ಧಿ ಆಗಬೇಕು, ಶರಣಾದ ನಕ್ಸಲರಿಗೆ ಕೊಡುವ ಪ್ಯಾಕೇಜ್ ಕೊಡಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿತ್ತು. ಅದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಿಲ್ ಕೊಟ್ಟಿತ್ತು. ಹಾಗಾಗಿಯೇ ಇತಿಹಾಸದಲ್ಲಿ ಮೊಟ್ಟ-ಮೊದಲು ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಸರ್ಕಾರ ಇಂದು ಮಲೆನಾಡಿಗೆ 7 ಕೋಟಿ ಹಣ ಕೊಟ್ಟಿರೋದು ನೋಡಿದರೆ ಶರಣಾದ ನಕ್ಸಲರಿಗೆ ಕೊಟ್ಟ ಮಾತು ಉಳಿಸಿಕೊಂಡಿತಾ ಎಂಬ ಅನುಮಾನ ದಟ್ಟವಾಗಿದೆ.

ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ಕಾಫಿನಾಡಿಗೆ 7 ಕೋಟಿ 12 ಲಕ್ಷ ಹಣ ಬಿಡುಗಡೆ ಮಾಡಿದೆ. ನಕ್ಸಲರು ಮಲೆನಾಡು ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತೋ ಹಲವೆಡೆ ಇಂದಿಗೂ ಹಾಗೇ ಇದೆ. ಕಾಡಂಚಿನ ಕುಗ್ರಾಮಗಳ ರಸ್ತೆ-ನೀರು-ಕರೆಂಟ್-ಕಾಲುಸಂಕ ಸೇರಿದಂತೆ ವಿವಿಧ ಸೌಲಭ್ಯ ನೀಡಲು ಸರ್ಕಾರ 7 ಕೋಟಿ ಹಣ ಬಿಡುಗಡೆ ಮಾಡಿದೆ. ಮಲೆನಾಡಿನ ಎಷ್ಟೋ ಗ್ರಾಮಗಳು ಈಗ ರಸ್ತೆ ನೋಡೋ ಅಂತಹಾ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ; ದಿಢೀರ್​ ಪ್ರತಿಭಟನೆ

ಇನ್ನು ಸರ್ಕಾರ ನಕ್ಸಲರು ಸರ್ಕಾರ-ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದಾಗಲೇ ಸರ್ಕಾರ ಕಾಡಂಚಿನ ಕುಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ನಕ್ಸಲರು-ಪೊಲೀಸರು-ಮಾಹಿತಿದಾರರ ಹೆಸರಲ್ಲಿ ಜನಸಾಮಾನ್ಯರು ಸಾಯುತ್ತಿರಲಿಲ್ಲ. ಆಗ ಸರ್ಕಾರ ನಕ್ಸಲರನ್ನು ಹುಡುಕೋದಕ್ಕೆ, ಸಿಕ್ಕಿದ್ರೆ ಸಾಯ್ಸೋದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿತ್ತು. ಅವರು ಆಚೆ ಬರುತ್ತೇವೆ ಅಂದಾಗ ಮತ್ತದೇ ಲಕ್ಷ-ಲಕ್ಷ ಹಣ ಕೊಟ್ಟು, ಸ್ಟೇಫಂಡ್, ಜಮೀನು ಅಂತ ಮತ್ತದೇ ಸರ್ಕಾರದ ಹಣವನ್ನ ಅವರಿಗೆ ಕೊಟ್ಟಿತು. ಸರ್ಕಾರಗಳು ಇದೇ ಕೆಲಸ ಅಂದೇ ಮಾಡಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗುತ್ತಿತ್ತು. ಯಾರೂ ಸಾಯುತ್ತಿರಲಿಲ್ಲ. ಎಎನ್‌ಎಫ್ ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಡು-ಮೇಡು ಅಲೆಯೋದು ತಪ್ಪುತ್ತಿತ್ತು. ಸರ್ಕಾರ ಈಗ್ಲಾದ್ರು ಎಚ್ಚೆತ್ತುಕೊಂಡಿರೋದು ಸಂತೋಷದ ಸಂಗತಿ. ಈಗಾಗಲೇ 7.12 ಕೋಟಿ ಬಿಡುಗಡೆಯಾಗಿದ್ದು, ಸರ್ಕಾರ ಎಲ್ಲೆಲ್ಲಿಗೆ ಏನೇನು ಬೇಕೆಂದು ಡಿ.ಪಿ.ಆರ್. ತಯಾರಿಸಿ ಸರ್ಕಾರದ ಅನುಮೋದನೆಯೊಂದಿಗೆ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

ಒಟ್ಟಾರೆ, ಅಂತು-ಇಂತು ಮಲೆನಾಡ ಕುಗ್ರಾಮ ಹಾಗೂ ಕಾಡಂಚಿನ ಗ್ರಾಮಗಳಿಗೆ ಅಭಿವೃದ್ಧಿ ನೋಡುವ ಭಾಗ್ಯ ಬಂದಿದೆ. 75 ವರ್ಷಗಳ ಬಳಿಕ ಎಷ್ಟೋ ಗ್ರಾಮಗಳು ರಸ್ತೆ-ಕಾಲುಸಂಕ-ಶುದ್ಧ ನೀರು-ಚರಂಡಿ-ಕರೆಂಟ್ ನೋಡೋ ಭಾಗ್ಯ ಸಿಗಲಿದೆ. ಇದನ್ನೂ ಓದಿ:ಚುನಾವಣೆಗೂ ಮುನ್ನವೇ ಬಿಹಾರ ಯುವಜನಕ್ಕೆ ಮೋದಿ ಭರ್ಜರಿ ಗಿಫ್ಟ್‌

Share This Article