50 ಮೌಲಾನ ಆಜಾದ್ ಮಾದರಿ ಶಾಲೆ ತೆರೆಯಲು ಸರ್ಕಾರ ಆದೇಶ – ವಿಪಕ್ಷಗಳ ಕಿಡಿ

Public TV
1 Min Read

ಬೆಂಗಳೂರು: ಅಲ್ಪಸಂಖ್ಯಾತರಿಗೆ (Minorities) ಮತ್ತೊಂದು ಬಂಪರ್ ಕೊಡುವ ಮೂಲಕ ರಾಜ್ಯ ಸರ್ಕಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು (Moulana Azad Model School) ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ.

2024-25ರ ಬಜೆಟ್‌ನಲ್ಲಿ ಘೋಷಿಸಿದ್ದ 100 ಆಜಾದ್ ಶಾಲೆಗಳ ಪೈಕಿ ಬಾಕಿ 50 ಶಾಲೆಗಳನ್ನು 25 ಜಿಲ್ಲೆಗಳ 43 ತಾಲೂಕುಗಳಲ್ಲಿ ತೆರೆಯಲು ಮುಂದಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಒಟ್ಟು 350 ಬೋಧಕ ಹುದ್ದೆಗಳೊಂದಿಗೆ ತೆರೆಯಲು ಆದೇಶಿಸಿದೆ. ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಮಾತ್ರ ಮೀಸಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಒದಗಿಸಲಾಗುತ್ತದೆ. ಈಗಾಗಲೇ ಅಲ್ಪಸಂಖ್ಯಾತರಿಗೆ 4% ಗುತ್ತಿಗೆ ಮೀಸಲಾತಿ, ವಸತಿ ಯೋಜನೆ ಮನೆಗಳಿಗೆ 15% ಮೀಸಲು ಹೆಚ್ಚಳ ಬಳಿಕ ಸರ್ಕಾರದ ಮತ್ತೊಂದು ನಿರ್ಧಾರ ಇದೀಗ ವಿವಾದಕ್ಕೆ ಗುರಿಯಾಗಿದೆ. ಇದನ್ನೂ ಓದಿ: 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

ಬಿಜೆಪಿ (BJP) ನಾಯಕರು ಸರ್ಕಾರದ ಈ ನಡೆಯನ್ನು ಅಲ್ಪಸಂಖ್ಯಾತರ ತುಷ್ಟೀಕರಣದ ಪರಾಕಾಷ್ಠೆ ಎಂದು ಟೀಕಿಸಿದ್ದಾರೆ. ಈ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿದೆ. ಕೇವಲ ಒಂದೇ ಸಮಯದಾಯದ ಓಲೈಕೆಗೆ ಮುಂದಾಗಿದೆ. ಸರ್ಕಾರ ಇದುವರೆಗೆ ಎಸ್‌ಸಿ, ಎಸ್‌ಟಿ ಮಕ್ಕಳಿಗೆ ಎಷ್ಟು ಶಾಲೆ, ಎಷ್ಟು ಲ್ಯಾಪ್‌ಟಾಪ್, ಎಷ್ಟು ಸ್ಕಾಲರ್ ಶಿಪ್ ಕೊಟ್ಟಿದೆ ಹೇಳಲಿ. ಹಿಂದುಳಿದ ವರ್ಗದ ಮಕ್ಕಳನ್ನು ಸರ್ಕಾರ ಮರೆತೇ ಬಿಟ್ಟಿದೆ ಎಂದು ಬಿಜೆಪಿ ನಾಯಕ ಪಿ.ರಾಜೀವ್ ಕೆಂಡ ಕಾರಿದ್ದಾರೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

Share This Article