ಕಾವೇರಿ ವಿಚಾರದಲ್ಲಿ ಗಲಾಟೆಗಳಾದ್ರೆ ಸರ್ಕಾರವೇ ಹೊಣೆ: ಆರ್.ಅಶೋಕ್

By
1 Min Read

ಬೆಂಗಳೂರು: ಕಾವೇರಿ ವಿಚಾರದಲ್ಲಿ ಪರಿಸ್ಥಿತಿ ಕೈ ಮೀರಿದ್ರೆ ಹೊತ್ತಿ ಉರಿಯುವ ಪರಿಸ್ಥಿತಿಗಳು ಆಗುತ್ತವೆ. ಕಾವೇರಿ ವಿಚಾರವಾಗಿ ಗಲಾಟೆಗಳಾದ್ರೆ ಕರ್ನಾಟಕ ಸರ್ಕಾರವೇ ನೇರ ಕಾರಣ ಅಂತಾ ಮಾಜಿ ಡಿಸಿಎಂ ಆರ್.ಅಶೋಕ್ ಕಿಚ್ಚು ಹೊತ್ತಿಸುವ ಹೇಳಿಕೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಬಿಟ್ಟರೆ, ನೀರು ತಡೆಯುತ್ತೇವೆ, ಬಿಜೆಪಿ ಹೋರಾಟ ಮಾಡಲಿದೆ ಅಂತೇಳಿದ್ರು. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ತಮಿಳುನಾಡಿಗೆ ನೀರು ಹರಿಸಿ ಸೋನಿಯಾಗಾಂಧಿ ತೃಪ್ತಿಪಡಿಸಲು ಮುಂದಾಗಿದ್ದಾರೆ. ಸೋನಿಯಾ ಚಿತಾವಣೆ ಮೇರೆಗೆ ಸಿಎಂ, ಡಿಸಿಎಂ ಅವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಅಂತಾ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಟಾಲಿನ್ ವಿರುದ್ಧ ಒಂದೇ ಒಂದು ಮಾತನಾಡಿಲ್ಲ, ಸರಿಯಾಗಿ ವಾದ ಮಾಡಲಿಲ್ಲ. ಸಚಿವರು ಇಲ್ಲೇ ಗೂಟಾ ಹೊಡೆದುಕೊಂಡು ಕೂತಿದ್ರು. ತಮಿಳುನಾಡಿನವರು ಹೋದ ಮೇಲೆ ಬೂಟಾಟಿಕೆಗೆ ಈಗ ದೆಹಲಿಗೆ ಹೋಗಿದ್ದಾರೆ ಅಂತಾ ಕೆಂಡಕಾರಿದ್ರು. ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಫಾಲೋ ದಿ ಲೀಡರ್. ಸ್ಟಾಲಿನ್ ಫಾಲೋ ಮಾಡಿದ್ರು ಅಷ್ಟೇ. ರೈಲು ಹೋದ್ಮೇಲೆ ಟಿಕೆಟ್ ತಗೊಂಡ್ರು ಟ್ರೈನ್ ಸಿಗುತ್ತಾ ಈಗ..!? ಅಂತಾ ಅಶೋಕ್ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ – ಕೇಂದ್ರ ಜಲ ಶಕ್ತಿ ಸಚಿವರ ಪ್ರತಿಕ್ರಿಯೆ ಸಕಾರಾತ್ಮಕ: ಸಿದ್ದರಾಮಯ್ಯ

ವಾದ ಸರಿಯಾಗಿ ಮಾಡಲಿಲ್ಲ, ತಜ್ಞರ ಸಂಪರ್ಕ ಮಾಡಲಿಲ್ಲ, ಏನೂ ಮಾಡಲಿಲ್ಲ ಇವರು. ಸ್ಟಾಲಿನ್ ಕೋಪ ಮಾಡಿಕೊಳ್ತಾರೆ ಅಂತಾ ಏನೂ ಮಾಡಲಿಲ್ಲ. ಕಾವೇರಿ ಪಾಲಿಗೆ ಇದು ದುರಾದೃಷ್ಟ ಸರ್ಕಾರ ಅಂತಾ ಅಶೋಕ್ ವಾಗ್ದಾಳಿ ನಡೆಸಿದ್ರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್