ದೇಶದಲ್ಲಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ: ರಾಹುಲ್ ಗಾಂಧಿ

Public TV
1 Min Read

ಬೆಂಗಳೂರು: ದೇಶದಲ್ಲಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪವರ್ ಆಫ್ ಟ್ರುತ್..ಟ್ರುತ್ ಆಫ್ ಪವರ್ ಅಗತ್ಯವಿದೆ. ಪ್ರಶ್ನಿಸುವ ಮನೋಭಾವವನ್ನು ಕೆಲಪತ್ರಿಕೋದ್ಯಮಿಗಳಿಂದ ಕಿತ್ತುಕೊಳ್ಳಲಾಗುತ್ತಿದೆ. ಸತ್ಯವನ್ನು ನಿಷ್ಪಕ್ಷಪಾತವಾಗಿ ಹೇಳುವ ಕೆಲಸ ನ್ಯಾಷನಲ್ ಹೆರಾಲ್ಡ್ ಮಾಡಲಿದೆ ಎಂದು ಅವರು ತಿಳಿಸಿದರು.

ಇದೊಂದು ವಿಶೇಷ ಕಾರ್ಯಕ್ರಮ. 70 ವರ್ಷದ ಇತಿಹಾಸವುಳ್ಳ ಪತ್ರಿಕೆ ಇಲ್ಲಿ ಪುನರಾರಂಭಗೊಳ್ಳುತ್ತಿರುವುದು ಹೆಮ್ಮೆ. ಸ್ವಾತಂತ್ರ, ಸಮಾನತೆ, ಸಾಮಾಜಿಕತೆ ಪತ್ರಿಕೆಯ ನೀತಿಯಾಗಿದ್ದು, ನ್ಯಾಷನಲ್ ಹೆರಾಲ್ಡ್ ಯಾವತ್ತಿದ್ದರೂ ಚಾಂಪಿಯನ್. ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಹಲವು ರಾಜಕೀಯ ಕಾರಣಗಳಿಂದಾಗಿ ಇದು ಸ್ಥಗಿತಗೊಂಡಿತು. ನೆಹರು ಸಂಪಾದಕರಾಗಿ ವರದಿಗಾರರಾಗಿ ಪತ್ರಿಕೆಗೆ ದುಡಿದರು. ಆದರೆ ಆದ್ರೆ ಎಂದಿಗೂ ಸಂಪಾದಕೀಯ ಮಂಡಳಿ ಮಧ್ಯ ಪ್ರವೇಶ ಮಾಡಲಿಲ್ಲ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪತ್ರಿಕೆಯನ್ನ ಪುನರಾರಂಭಿಸಿದ್ದು ಮಹತ್ತರ ಕಾರ್ಯ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.

ಸ್ಮರಣ ಸಂಚಿಕೆಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿಆರ್ ವಾಲಾ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ಖಚಾಂಚಿ ಮೋತಿಲಾಲ್ ವೋರಾ ಸೇರಿದಂತೆ ಕಾಂಗ್ರೆಸಿನ ಶಾಸಕರು, ಸಂಸದರು, ಪದಾಧಿಕಾರಿಗಳು ಭಾಗಿಯಾಗಿದ್ದರು.

ಆರಂಭದಲ್ಲಿ ವಾರಪತ್ರಿಕೆಯಾಗಿ ಬಿಡುಗಡೆಯಾಗಲಿರುವ ನ್ಯಾಷನಲ್ ಹೆರಾಲ್ಡ್ ಒಂದೂವರೆ ತಿಂಗಳಿನಲ್ಲಿ ದಿನಪತ್ರಿಕೆಯಾಗಿ ಬದಲಾಗಲಿದೆ.

 

Share This Article
Leave a Comment

Leave a Reply

Your email address will not be published. Required fields are marked *