`ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

Public TV
2 Min Read

– ತಪ್ಪು ಸರಿಪಡಿಸಿಕೊಳ್ಳಲು ಅವಕಾಶಕ್ಕೆ ಡಿಕೆಶಿ ಸೂಚನೆ

ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಿಂದಾಗಿ ಬಂದ್ ಆಗಿರೋ `ಬಿಗ್‌ಬಾಸ್’ (Bigg Boss Kannada) ರಿಯಾಲಿಟಿ ಶೋಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಮಾದರಿ ಕ್ಷಣಕ್ಕೊಂದು ತಿರುವು ಸಿಗುತ್ತಿದ್ದು, ಇಡೀ ಪ್ರಸಂಗ ಗೊಂದಲಮಯವಾಗಿದೆ. ಇವತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮಧ್ಯಸ್ಥಿಕೆ ವಹಿಸಿ, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೂಡ ಕೊಟ್ಟಿದ್ದರು.

ಡಿಕೆಶಿ ಸೂಚನೆ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಡಿಸಿಯನ್ನು ಭೇಟಿಯಾಗಿದ್ದ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, 10 ದಿನಗಳ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್, ಕೋರ್ಟ್ ಅಫಿಡವಿಟ್ ಸಲ್ಲಿಕೆ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾವಣೆ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋಸ್ ಮೇಲಿನ ಹಳೆ ಆರೋಪದ ಅರ್ಜಿ ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ನಾಳೆ ಜಾಲಿವುಡ್ ಅರ್ಜಿ ಸಲ್ಲಿಸಲಿದ್ದು, 10ರಿಂದ 15 ದಿನಗಳ ತಾತ್ಕಾಲಿಕ ರಿಲೀಫ್ ನೀಡೋ ಸಾಧ್ಯತೆ ಇದೆ. ಆದ್ರೆ, ಈಗಾಗಲೇ ನಮಗೆ ಜಿಲ್ಲಾಡಳಿತದಿಂದ ರಿಲೀಫ್ ಸಿಕ್ಕಿದೆ ಅಂತ ಜಾಲಿವುಡ್ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇದನ್ನು ನಿರಾಕರಿಸಿರೋ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಪ್ರಕರಣ ಕೋರ್ಟ್‌ನಲ್ಲಿದೆ. ಮಾನವೀಯತೆ ದೃಷ್ಟಿಯಿಂದ ಏನಾದ್ರೂ ಮಾಡಬಹುದು ಅಂದಿದ್ದಾರೆ.

ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?
* ಜಾಲಿವುಡ್ ಸ್ಟುಡಿಯೋದಲ್ಲಿ 400ಕ್ಕೂ ಕಾರ್ಮಿಕರಿದ್ದಾರೆ
* ಬಿಗ್‌ಬಾಸ್ ರಿಯಾಲಿಟಿ ಶೋ ಕೂಡ ನಡೆಯುತ್ತಿದೆ
* ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರಿಗೆ ಕುತ್ತು
* ತಮ್ಮಿಂದ ತಪ್ಪಾಗಿದೆ.. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ
* 10 ದಿನಗಳ ಸಮಯಾವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ

ರಾಮನಗರ ಜಿಲ್ಲಾಧಿಕಾರಿಯ ನಿಲುವೇನು..?
* ಜಾಲಿವುಡ್ ಸ್ಟುಡಿಯೋ 10 ದಿನಗಳ ಕಾಲಾವಕಾಶ ಕೇಳಿದೆ
* ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೇಳಿದ್ದಾರೆ
* ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾಯಿಸಿದ್ದೇವೆ
* ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ

ಮಾಲಿನ್ಯ ನಿಯಂತ್ರಣ ಮಂಡಳಿ ಹೇಳೋದೇನು…?
* ಈ ಕೇಸ್ ಕೋರ್ಟಿನಲ್ಲಿದೆ; 10 ದಿನಗಳ ಕಾಲಾವಕಾಶ ನಿರ್ಧರಿಸಿಲ್ಲ
* ಬಿಗ್‌ಬಾಸ್‌ಗೂ ಸ್ಟುಡಿಯೋಗೆ ಸಂಬAಧವಿಲ್ಲ
* ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಸಮಸ್ಯೆ ಉಂಟಾಗಿದೆ
* ಏಕಾಏಕಿ ಮುಚ್ಚಿಲ್ಲ; 3 ಬಾರಿ ನೋಟಿಸ್ ಕೊಟ್ಟಿದ್ದೇವೆ
* ಅಫಿಡವಿಟ್ ಜೊತೆ ಮನವಿ ಕೊಟ್ಟರೆ ಪರಿಶೀಲನೆ ನಡೆಸಬಹುದು
* ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ.
* ನಿಯಮ ಉಲ್ಲಂಘನಗೆ ದಂಡ ಕಟ್ಟಬೇಕಾಗುತ್ತದೆ.

Share This Article