ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

By
1 Min Read

ಬೆಂಗಳೂರು: ಮಾರ್ಚ್ 22 ರಂದು ಕನ್ನಡ ಸಂಘಟನೆಗಳು (Kannada Organisations) ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bundh) ಸರ್ಕಾರದ ಬೆಂಬಲ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ವಿಧಾನ ಪರಿಷತ್ ಕಲಾಪದ ವೇಳೆ ವಿಪಕ್ಷ ನಾಯಕ ನಾರಾಯಣಸ್ವಾಮಿ ವಿಷಯ ಪ್ರಸ್ತಾಪ ಮಾಡಿದರು. ಮಾರ್ಚ್ 22ರಂದು ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಮಾರ್ಚ್ 22ರಂದು ಎಸ್‌ಎಸ್‌ಎಲ್‌ಸಿ ಸೇರಿ ಅನೇಕ ಪರೀಕ್ಷೆಗಳು ನಡೆಯಲಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಮಕ್ಕಳಿಗಳು ಭಯ ಭೀತರಾಗಿದ್ದರು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಛತ್ತೀಸ್‌ಗಢ – ಪ್ರತ್ಯೇಕ ಪ್ರಕರಣದಲ್ಲಿ 22 ನಕ್ಸಲರ ಎನ್‌ಕೌಂಟರ್

ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ನೀಡಿ ಸದ್ಯಕ್ಕೆ ಈ ಬಂದ್ ಅವಶ್ಯಕತೆ ಇರಲಿಲ್ಲ. ಸಂಘಟನೆಗಳು ಸರ್ಕಾರದ ಜೊತೆ ಮಾತಾಡಬೇಕಿತ್ತು. ನಾನು ಕೂಡಾ ಮಾರ್ಚ್ 22ರಂದು ವರ್ಲ್ಡ್ ವಾಟರ್ ಡೇ ಮಾಡಬೇಕು ಅಂತ ಇದ್ದೆ. ಬಂದ್‌ಗೆ ನಾವು ಬೆಂಬಲ ಕೊಡಲ್ಲ. ನಾವು ಬಂದ್ ಮಾಡೋರಿಗೆ ತಿಳುವಳಿಕೆ ಕೊಡುತ್ತೇವೆ. ಮಕ್ಕಳಿಗೆ ಎಕ್ಸಾಂ ಶುರುವಾಗಿದೆ. ಅಧಿಕಾರಿಗಳ ಜೊತೆ ಮಾತಾಡಿ ಮತ್ತೊಮ್ಮೆ ಹೇಳಿಕೆ ಕೊಡೋದಾಗಿ ತಿಳಿಸಿದರು. ಇದನ್ನೂ ಓದಿ: ಯುಜಿಸಿಇಟಿ ಪರೀಕ್ಷೆ ನಂತರ ತಿದ್ದುಪಡಿಗೆ ಅವಕಾಶ: ಕೆಇಎ

Share This Article