ಬೇಲಿಯೇ ಎದ್ದು ಹೊಲ ಮೇಯ್ದ ಕಥೆ – ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಗುಳುಂ

Public TV
2 Min Read

ಬೆಂಗಳೂರು: ಉದ್ಯಾನನಗರಿ ಬೆಂಗಳೂರು(Bengaluru) ಕಾಂಕ್ರೀಟ್ ಕಾಡು ಆಗುವ ಭರದಲ್ಲಿ ತನ್ನ ಮೂಲ ಸ್ವರೂಪವನ್ನ ಕಳೆದುಕೊಂಡು ಎಷ್ಟೋ ವರ್ಷಗಳಾಗಿದೆ. ಮಳೆ(Rain) ಅನಾಹುತದ ನಂತ್ರ ಒತ್ತುವರಿ ಬಗ್ಗೆ ವರಿ ಮಾಡಿರೋ ಸರ್ಕಾರ ಕೆರೆ ಒತ್ತುವರಿ(Lake Encroachment) ಪಟ್ಟಿ ಬಿಡುಗಡೆ ಮಾಡಿದೆ. ವಿಪರ್ಯಾಸ ಅಂದರೆ ಖಾಸಗಿಯವರಿಂದ ಆದ ಒತ್ತುವರಿಗಿಂತ ಸರ್ಕಾರಿ ಸಂಸ್ಥೆಗಳಿಂದಲೇ ಆದ ಒತ್ತುವರಿಯೇ ಹೆಚ್ಚು.

ಮಾಯವಾದ ಕೆರೆಗಳ ಬಹುಪಾಲನ್ನು ಸರ್ಕಾರಿ ಸಂಸ್ಥೆಗಳೇ ನುಂಗಿವೆ. ಜನ, ಖಾಸಗಿಯವರತ್ತ ಬೊಟ್ಟು ಮಾಡುತ್ತಿರುವ ಸರ್ಕಾರ, ತನ್ನಿಂದಲೇ ಆದ ತಪ್ಪುಗಳತ್ತ ನೋಡುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳನ್ನೇ ಗುಳುಂ ಮಾಡಿರೋ ಸರ್ಕಾರ, ತಪ್ಪಿತಸ್ಥ ಸ್ಥಾನದಲ್ಲಿ ನಿಂತಿದೆ.. ಈ ಪಟ್ಟಿಯಲ್ಲಿ ಬಿಡಿಎ(BDA), ಬಿಬಿಎಂಪಿ(BBMP), ಸ್ಲಂಬೋರ್ಡ್, ಬಿಎಂಟಿಸಿ, ಗೃಹ ಮಂಡಳಿ, ಕೆಐಎಡಿಬಿ, ರೈಲ್ವೆ ಸೇರಿ ಅನೇಕ ಇಲಾಖೆಗಳಿವೆ. ಇದನ್ನೂ ಓದಿ: ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?

ಅದರಲ್ಲೂ ಬಿಡಿಎ ಒತ್ತುವರಿ ಶೂರ ಎಂದ್ರೆ ತಪ್ಪಲ್ಲ. ಯಾಕೆಂದರೆ ಅತೀ ಹೆಚ್ಚು ಕೆರೆ ಒತ್ತುವರಿ ಬಿಡಿಎನಿಂದಲೇ ಆಗಿದೆ. ಕೋಳಿವಾಡ ಸಮಿತಿ ನೀಡಿದ ವರದಿಯನ್ನೇ ಆಧಾರವಾಗಿರಿಸಿಕೊಂಡು ಬಿಬಿಎಂಪಿ 201 ಕೆರೆಗಳು ಒತ್ತುವರಿ ಆಗಿರೋ ಬಗ್ಗೆ ದಾಖಲೆ ಸಿದ್ದಪಡಿಸಿದೆ

ಕೆರೆ ನುಂಗಣ್ಣರು ಯಾರು:
* ಬಿಡಿಎ – 128.5 ಎಕರೆ
* ಬಿಬಿಎಂಪಿ -85.07 ಎಕರೆ
* ಸ್ಲಂ ಬೋರ್ಡ್ – 30.12 ಎಕರೆ
* ಮಾಲಿನ್ಯ ನಿಯಂತ್ರಣ ಮಂಡಳಿ – 15.24
* ಅರಣ್ಯ – 13.23 ಎಕರೆ
* ರೈಲ್ವೆ – 12.63 ಎಕರೆ
* ಖಾಸಗಿಯವರು – 200 ಎಕರೆ

ಸಿಎಜಿ ವರದಿ ಸಲ್ಲಿಕೆ:
ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಿಎಜಿ 2020-21ರ ಸಾಲಿನ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಕೋರ್ಟ್ ನಿರ್ದೇಶನವನ್ನು ಬಿಬಿಎಂಪಿ ಗಾಳಿಗೆ ತೂರಿದೆ ಎಂದು ಉಲ್ಲೇಖಿಸಲಾಗಿದೆ. ಮಳೆ ನೀರುಗಾಲುವೆ ವ್ಯವಸ್ಥೆ ಹಾಳಾಗಲು ಬಿಬಿಎಂಪಿ ಕಾರಣ ಎಂದಿದೆ. ಆರ್‍ಎಂಪಿ-2015ರ ಪ್ರಕಾರ ರಾಜಕಾಲುವೆ ಎರಡು ಬದಿಯಲ್ಲಿ ಸ್ಪಷ್ಟವಾಗಿ ಬಫರ್ ಜೋನ್ ಗುರುತು ಮಾಡಬೇಕು. ಆದರೆ ಕೆಎಂಸಿ ಆಕ್ಟ್ 1976ರ ಸೆಕ್ಷನ್ 58 ಪ್ರಕಾರ ಗೊತ್ತು ಮಾಡಿದ ಕಾಲುವೆ ಗಡಿಗಳನ್ನು ಪರಿಶೀಲನೆ ಮಾಡಿದಾಗ, ಅವುಗಳ ನಿರ್ವಹಣೆ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಬಿಬಿಎಂಪಿಯಿಂದಲೇ ರಾಜ ಕಾಲುವೆ ಬಫರ್ ಜೋನ್ ನಿಯಮ ಪಾಲನೆ ಆಗದಿರುವುದೇ ಅತಿಕ್ರಮಣಕ್ಕೆ ಕಾರಣ ಎಂದು ಸಿಎಜಿ ಹೇಳಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

ಸಿಎಜಿ ವರದಿಯಲ್ಲಿ ಏನಿದೆ?
* 2016-2020ರವರೆಗೂ 2,626 ಕಡೆ ರಾಜಕಾಲುವೆ ಒತ್ತುವರಿ
* 2016-2021ರವರೆಗೂ 1 ಸಾವಿರಕ್ಕೂ ಹೆಚ್ಚು ಒತ್ತುವರಿ ತೆರವು
* ಅಧಿಕಾರಿಗಳು, ಗುತ್ತಿಗೆದಾರರಿಂದ ಒತ್ತುವರಿ ತೆರವಿನ ನಷ್ಟ ಭರಿಸಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *