ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸು (Bus) ವಿದ್ಯುತ್ ಕಂಬಕ್ಕೆ (Electric Pole) ಗುದ್ದಿದ ಘಟನೆ ಕುರುಗೋಡು (Kurugodu) ತಾಲೂಕಿನ ಕೋಳೂರು ಬಸ್ ನಿಲ್ದಾಣದ ಬಳಿ ನಡೆದಿದೆ.
ಕುರುಗೋಡು ಪಟ್ಟಣದಿಂದ ಬಳ್ಳಾರಿಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್, ಕುರುಗೋಡು ತಾಲೂಕಿನ ಕೋಳೂರು ಬಸ್ ಸ್ಟಾಪ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ಪರಿಣಾಮ ವಿದ್ಯುತ್ ಕಂಬ 3 ತುಂಡಾಗಿ ಬಸ್ ಮೇಲೆಯೇ ಬಿದ್ದಿದೆ. ಇದನ್ನೂಓದಿ: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕದ್ರಿ ಸಂಚಾರಿ ಠಾಣೆ ಎಎಸ್‌ಐ
ಗುದ್ದಿದ ಸಮಯದಲ್ಲಿ ವಿದ್ಯುತ್ ಪ್ರವಹಿಸದೇ ಇದ್ದ ಕಾರಣ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.